G20 ಶೃಂಗಸಭೆ: ಕೊನಾರ್ಕ್ ಚಕ್ರ ಪ್ರದರ್ಶನದ ಮುಂದೆ ನಿಂತು ವಿಶ್ವನಾಯಕರನ್ನು ಸ್ವಾಗತಿಸಿದ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

G20 ಶೃಂಗಸಭೆ ಹಿನ್ನೆಲೆ ಭಾರತ ಮಂಟಪದಲ್ಲಿ ಒಡಿಶಾದಲ್ಲಿರುವ ಕೊನಾರ್ಕ್‌ನ ಸೂರ್ಯ ದೇವಾಲಯದ ಚಕ್ರವನ್ನು ಪ್ರದರ್ಶಿಸಲಾಗಿದೆ. ಇದೆ ಮುಂದೆ ನಿಂತು ಪ್ರಧಾನಿ ಮೋದಿಯವರು ವಿದೇಶಿ ನಾಯಕರಿಗೆ  ಹಸ್ತಲಾಘವ ನೀಡಿ ಸ್ವಾಗತಿಸಿದರು.

ಜಿ20 ಶೃಂಗಸಭೆಗಾಗಿ ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪಕ್ಕೆ ಆಗಮಿಸಿದ ಜಿ20 ನಾಯಕರು ಮತ್ತು ಪ್ರತಿನಿಧಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ನಾಯಕರು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಂತೆ, ಕೊನಾರ್ಕ್‌ ಚಕ್ರದ ಮುಂದೆ ನಿಂತು ಪಿಎಂ ಮೋದಿ ಸ್ವಾಗತಿಸಿದರು.

ಈ ಚಕ್ರವನ್ನು 13ನೇ ಶತಮಾನದ ರಾಜ ನರಸಿಂಹದೇವ-I ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಚಕ್ರ ಭಾರತದ ರಾಷ್ಟ್ರೀಯ ಧ್ವಜದಲ್ಲೂ ಸ್ಥಾನ ಪಡೆದಿದೆ. ಇದು ಭಾರತದ ಪ್ರಾಚೀನ ಬುದ್ಧಿವಂತಿಕೆ, ಮುಂದುವರಿದ ನಾಗರಿಕತೆ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಸಾರುತ್ತದೆ. ಚಲನೆಯನ್ನು ಸಂಕೇತಿಸುವ ಈ ಚಕ್ರ ಸಮಯ, ಕಾಲಚಕ್ರ ಜೊತೆಗೆ ಪ್ರಗತಿ ಮತ್ತು ನಿರಂತರ ಬದಲಾವಣೆಯನ್ನು ಸಹ ಸೂಚಿಸುತ್ತದೆ. ಪ್ರಜಾಪ್ರಭುತ್ವದ ಪ್ರಬಲ ಸಂಕೇತವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಐಎಂಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಅವರು ಭಾರತ್ ಮಂಟಪದ ಸ್ಥಳಕ್ಕೆ ಆಗಮಿಸಿದ ಮೊದಲ ಕೆಲವು ನಾಯಕರಲ್ಲಿ ಸೇರಿದ್ದಾರೆ.

ನಿನ್ನೆ ರಾಷ್ಟ್ರ ರಾಜಧಾನಿಗೆ ಆಗಮಿಸಿದ ನಾಯಕರಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಸೇರಿದಂತೆ ವಿಶ್ವ ನಾಯಕರು ಸೇರಿದ್ದಾರೆ.

ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!