ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ: ರಿಲಯನ್ಸ್ ಒಡೆಯ ಅಂಬಾನಿ ಈಗ 116 ಶತಕೋಟಿ ಡಾಲರ್‌ಗಳ ಮಾಲಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 200 ಭಾರತೀಯರು ಸೇರಿಕೊಂಡಿದ್ದಾರೆ.

ಭಾರತದ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದು, ಬರೋಬ್ಬರಿ 116 ಶತಕೋಟಿ ಡಾಲರ್‌ಗಳ ಮಾಲಕರಾಗಿದ್ದಾರೆ. ಭಾರತ ಹಾಗೂ ಏಷ್ಯಾದಲ್ಲಿಯೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದಲ್ಲದೆ ಅವರು ಜಾಗತಿಕ ಮಟ್ಟದಲ್ಲಿಯೂ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಅಂಬಾನಿ ನಿವ್ವಳ ಮೌಲ್ಯವು 39.76% ಹೆಚ್ಚಾಗಿದ್ದು, ಅವರು 100 ಬಿಲಿಯನ್ ಡಾಲರ್ ಕ್ಲಬ್‌ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರಾಗಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.

ಇನ್ನು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ 84 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಾವಿತ್ರಿ ಜಿಂದಾಲ್ 33.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.

ನರೇಶ್ ಟ್ರೆಹಾನ್, ರಮೇಶ್ ಕುಂಞಿಕಣ್ಣನ್ ಮತ್ತು ರೇಣುಕಾ ಜಗ್ತಿಯಾನಿ ಸಹಿತ 25 ಹೊಸ ಭಾರತೀಯ ಬಿಲಿಯನೇರ್‌ಗಳು ಈ ಪಟ್ಟಿಗೆ ಸೇರಿದ್ದಾರೆ. ಬೈಜು ರವೀಂದ್ರನ್, ರೋಹಿಕಾ ಮಿಸ್ತ್ರಿ ಅವರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬದವರು 233 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಎಲೋನ್ ಮಸ್ಕ್, ಜೆಫ್ ಬೆಜೋಸ್, ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಎಲಿಸನ್ ಇದ್ದಾರೆ.

ಇವರೇ ನೋಡಿ ಭಾರತದ ಟಾಪ್ 10 ಶ್ರೀಮಂತರು!
ಮುಖೇಶ್ ಅಂಬಾನಿ (ನಿವ್ವಳ ಮೌಲ್ಯ 116 ಬಿಲಿಯನ್ ಡಾಲರ್)
ಗೌತಮ್ ಅದಾನಿ (84 ಬಿಲಿಯನ್ ಡಾಲರ್)
ಶಿವ ನಡಾರ್ (36.9 ಬಿಲಿಯನ್ ಡಾಲರ್)
ಸಾವಿತ್ರಿ ಜಿಂದಾಲ್ (33.5 ಬಿಲಿಯನ್ ಡಾಲರ್)
ದಿಲೀಪ್ ಶಾಂಘ್ವಿ (26.7 ಬಿಲಿಯನ್ ಡಾಲರ್)
ಸೈರಸ್ ಪೂನಾವಲ್ಲಾ (21.3 ಬಿಲಿಯನ್ ಡಾಲರ್)
ಕುಶಾಲ್ ಪಾಲ್ ಸಿಂಗ್ (20.9 ಬಿಲಿಯನ್ ಡಾಲರ್)
ಕುಮಾರ್ ಬಿರ್ಲಾ (19.7 ಬಿಲಿಯನ್ ಡಾಲರ್)
ರಾಧಾಕಿಶನ್ ದಮಾನಿ (17.6 ಬಿಲಿಯನ್ ಡಾಲರ್)
ಲಕ್ಷ್ಮಿ ಮಿತ್ತಲ್ (16.4 ಬಿಲಿಯನ್ ಡಾಲರ್)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!