ನವೆಂಬರ್‌ ನಲ್ಲಿ 14.72 ಶತಕೋಟಿ ಡಾಲರ್‌ ಏರಿಕೆಯಾಗಿದೆ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಕೆಲ ತಿಂಗಳಿನಿಂದ ಕುಸಿಯುತ್ತಿದ್ದ ಭಾರತದ ವಿದೇಶಿ ವಿನಿಮಯ ಸಂಗ್ರಹವು ನವೆಂಬರ್‌ ತಿಂಗಳ ಎರಡನೇ ವಾರದಲ್ಲಿ ಮತ್ತೆ ಏರಿಕೆಯಾಗಿದೆ. ಹಿಂದಿನ ವಾರದಲ್ಲಿ 1.09 ಶತಕೋಟಿ ಡಾಲರ್‌ ಕುಸಿತದ ಹೊರತಾಗಿಯೂ ನವೆಂಬರ್ 11 ರ ನಂತರದಲ್ಲಿ 14.72 ಶತಕೋಟಿ ಡಾಲರ್‌ ಏರಿಕೆಯಾಗಿ ಒಟ್ಟೂ ವಿನಿಮಯ ಸಂಗ್ರಹವು 544.72 ಶತಕೋಟಿ ಡಾಲರ್‌ ಗೆ ಏರಿಕೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ ಇತ್ತೀಚಿನ ಸಾಪ್ತಾಹಿಕ ಮಾಹಿತಿಯ ಪ್ರಕಾರ, ನವೆಂಬರ್ 4 ರವರೆಗೆ 529.99 ಶತಕೋಟಿ ಡಾಲರ್ ಇತ್ತು. ‌ ಜಾಗತಿಕ ಏರಿಳಿತದ ನಡುವೆ RBI ರೂಪಾಯಿ ಕುಸಿತವನ್ನು ತಡೆಗಟ್ಟಲು ಕ್ರಮ ವಹಿಸುತ್ತಿರುವುದರಿಂದ ಮಾರ್ಚ್‌ನಿಂದ ಇಲ್ಲಿಯವರೆಗೆ 110 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚು ಕುಸಿದಿದೆ.

ಅದರಲ್ಲೂ ವಿಶೇಷವಾಗಿ ವಿದೇಶಿ ವಿನಿಮಯ ಸಂಗ್ರಹದಲ್ಲಿ ಹೆಚ್ಚು ಪಾಲು ಹೊಂದಿರುವ ವಿದೇಶಿ ಕರೆನ್ಸಿ ಆಸ್ತಿಗಳು 11.8 ಶತಕೋಟಿ ಡಾಲರ್‌ ಏರಿಕೆಯಾಗಿ ಒಟ್ಟೂ 482.53 ಶತಕೋಟಿ ಡಾಲರ್‌ ಗೆ ಏರಿದೆ.

ವಿದೇಶಿ ಕರೆನ್ಸಿ ಆಸ್ತಿಗಳು, ಇದು ಮೀಸಲುಗಳ ಅತಿದೊಡ್ಡ ಅಂಶವಾಗಿದೆ, ವರದಿ ವಾರಕ್ಕೆ $11.8 ಶತಕೋಟಿ $482.53 ಶತಕೋಟಿಗೆ ಏರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!