ನೀರಜ್ ಚೋಪ್ರಾ ಸಹಿತ ಮೂವರು ಕ್ರೀಡಾಪಟುಗಳಿಗೆ ವಿದೇಶಿ ತರಬೇತಿ: ಕ್ರೀಡಾ ಸಚಿವಾಲಯ ಅನುಮೋದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಯುಕೆಯ ಲೌಬರೋ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುವ ಪ್ರಸ್ತಾವನೆಗೆ ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ.

ಈ ಮೂಲಕ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್, ಕೋಚ್ ಕ್ಲಾಸ್ ಬಾರ್ಟೋನಿಟ್ಜ್ ಮತ್ತು ಫಿಸಿಯೋಥೆರಪಿಸ್ಟ್ ಇಶಾನ್ ಮರ್ವಾಹಾ ಅವರೊಂದಿಗೆ 63 ದಿನಗಳ ಕಾಲ ಲೌಬರೋದಲ್ಲಿ ತರಬೇತಿ ಪಡೆಯಲಿದ್ದಾರೆ.

ನೀರಜ್ ಜೊತೆಗೆ ಸರ್ಕಾರದ ಮಿಷನ್ ಒಲಿಂಪಿಕ್ ಸೆಲ್ (MOC), ಷಟ್ಲರ್ ಕಿಡಂಬಿ ಶ್ರೀಕಾಂತ್, ಕುಸ್ತಿಪಟು ದೀಪಕ್ ಪುನಿಯಾ ಮತ್ತು ಜಾವೆಲಿನ್ ಎಸೆತಗಾರ, ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ ಅಣ್ಣು ರಾಣಿಯವರ ಪ್ರಸ್ತಾಪಗಳನ್ನು ಕ್ರೀಡಾ ಸಚಿವಾಲಯ ಅಂಗೀಕರಿಸಿದೆ.
ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (NSDF) ಅಡಿಯಲ್ಲಿ ಎಲ್ಲಾ ಕ್ರೀಡಾಪಟುಗಳ ತರಬೇತಿಗೆ ಅಂದಾಜು ವೆಚ್ಚ ಸುಮಾರು 94 ಲಕ್ಷ ರೂ.ತಗಲಿದೆ.

ಶ್ರೀಕಾಂತ್ ತಮ್ಮ ಕೋಚ್ ಮತ್ತು ಫಿಸಿಯೋಥೆರಪಿಸ್ಟ್ ಜೊತೆಗೆ ಜಕಾರ್ತದ ಪ್ರಿಸ್ಮಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ 29 ದಿನಗಳ ಕಾಲ ತರಬೇತಿ ಪಡೆಯಲಿದ್ದಾರೆ. ಪುನಿಯಾ ಅವರು ಮಿಚಿಗನ್‌ನಲ್ಲಿ ತಮ್ಮ ಭೌತಚಿಕಿತ್ಸಕರೊಂದಿಗೆ 34 ದಿನಗಳ ಕಾಲ ಇರುತ್ತಾರೆ. ಅಣ್ಣು ರಾಣಿ ತಮ್ಮ ಭೌತಚಿಕಿತ್ಸಕರೊಂದಿಗೆ ಜರ್ಮನಿಯ ಲೀಚ್ಟಾಥ್ಲೆಟಿಕ್-ಜೆಮಿನ್‌ಶಾಫ್ಟ್ (ಎಲ್‌ಜಿ) ಒಫೆನ್‌ಬರ್ಗ್‌ನಲ್ಲಿ ನೀರಜ್‌ಗೆ ತರಬೇತಿ ನೀಡಿದ್ದ ಕೋಚ್ ವರ್ನರ್ ಡೇನಿಯಲ್ಸ್ ಅವರ ಅಡಿಯಲ್ಲಿ ತರಬೇತಿ ಪಡೆಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!