February 28, 2026
Saturday, February 28, 2026
spot_img

ಪುಂಡಾನೆಗಳ ಅಟ್ಟಹಾಸಕ್ಕೆ ಅರಣ್ಯ ಇಲಾಖೆ ಬ್ರೇಕ್: ಚನ್ನಪಟ್ಟಣದಲ್ಲಿ ‘ಆಪರೇಷನ್ ಎಲಿಫೆಂಟ್’ ಆರಂಭ!

ರಾಮನಗರ ಹಾಗೂ ಚನ್ನಪಟ್ಟಣ ಭಾಗದಲ್ಲಿ ನಿರಂತರವಾಗಿ ಬೆಳೆ ಹಾನಿ ಮತ್ತು ಪ್ರಾಣಹಾನಿ ಮಾಡುತ್ತಾ ಆತಂಕ ಸೃಷ್ಟಿಸಿರುವ ಎರಡು ಕಾಡಾನೆಗಳ ಸೆರೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ಬಿರುಸಿನ ಕಾರ್ಯಾಚರಣೆ ಆರಂಭಗೊಂಡಿದೆ.

ಅರಣ್ಯ ಇಲಾಖೆಯು ಈ ಕಾರ್ಯಾಚರಣೆಗಾಗಿ ನಾಡಿನ ಪ್ರಸಿದ್ಧ ಸಾಕಾನೆಗಳಾದ ಸುಗ್ರೀವ, ಕಂಜನ್, ಧನಂಜಯ, ಹರ್ಷ, ಈಶ್ವರ ಮತ್ತು ಅಯ್ಯಪ್ಪ ಎಂಬ ಆರು ಸಾಕಾನೆಗಳನ್ನು ಕರೆತಂದಿದೆ. ಕಾರ್ಯಾಚರಣೆ ಆರಂಭಿಸುವ ಮುನ್ನ ಸಂಪ್ರದಾಯದಂತೆ ಈ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ವಿಜಯದ ಹಾರೈಕೆ ಮಾಡಲಾಯಿತು.

ಡಿಸಿಎಫ್ ರಾಮಕೃಷ್ಣಪ್ಪ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದ್ದು, ದಟ್ಟ ಅರಣ್ಯ ಹಾಗೂ ತೋಟಗಳಲ್ಲಿ ಅಡಗಿರುವ ಪುಂಡಾನೆಗಳನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮೆರಾಗಳ ನೆರವು ಪಡೆಯಲಾಗುತ್ತಿದೆ. ಕಾಡಾನೆಗಳು ಪತ್ತೆಯಾದ ತಕ್ಷಣ ಅರಿವಳಿಕೆ ಮದ್ದು ನೀಡಿ ಅವುಗಳನ್ನು ಸೆರೆಹಿಡಿಯಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಕಾರ್ಯಾಚರಣೆಯಿಂದಾಗಿ ಸ್ಥಳೀಯ ರೈತರು ಸಮಾಧಾನಗೊಂಡಿದ್ದು, ಆದಷ್ಟು ಬೇಗ ಉಪಟಳ ನೀಡುವ ಆನೆಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !