Monday, March 27, 2023

Latest Posts

ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ವಾಚರ್ ಬಲಿ

ಹೊಸದಿಗಂತ ವರದಿ,ಮೈಸೂರು:

ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ವಾಚರ್‌ರೊಬ್ಬರು ಬಲಿಯಾಗಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ದಡದಹಳ್ಳಿ ಹಾಡಿಯ ಆದಿವಾಸಿ ವಾಚರ್ ಬೊಮ್ಮ ಸಾವನ್ನಪ್ಪಿದ್ದಾರೆ . . ಬೊಮ್ಮ ಮತ್ತು ಮಧುಕೊಯ್ಲರ್ ಎಂಬ ಇಬ್ಬರು ವಾಚರ್ ಗಳು ಅರಣ್ಯದ ಗಸ್ತಿನಲ್ಲಿದ್ದಾಗ ಕಾಡಾನೆ ಹಠಾತ್ ಎದುರಾಗಿದೆ.
ಕಾಡಾನೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೊಮ್ಮ ಕಂದಕಕ್ಕೆ ಬಿದ್ದಿದ್ದಾನೆ.
ಕಂದಕದಲ್ಲಿ ಬಿದ್ದ ಬೊಮ್ಮನನ್ನು ಕಾಡಾನೆ ಸೊಂಡಲಿನಿoದ ಮೇಲಕ್ಕೆಸೆದು ಗಾಯಗೊಳಿಸಿದೆ.
ಕಂದಕದಲ್ಲಿ ಸಿಲಿಕಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಬೆ. ಸ್ಥಳಕ್ಕೆ ಬಂದ ಸಿಬ್ಬಂದಿ ಕೈಮೂಳೆ ಮುರಿದು ಗಂಭೀರ ಗಾಯವಾಗಿದ್ದ ಬೊಮ್ಮನನ್ನು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿ ಎಫ್ ಓ ರವಿಕುಮಾರ್, ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು..
ಮೃತನ ಕುಟುಂಬಕ್ಕೆ ಜೀವ ವಿಮೆ ಸೆರಿದಂತೆ ಇನ್ನಿತರ ಸವಲತ್ತು ಸೇರಿ 35ಲಕ್ಷ ಪರಿಹಾರ ಕೊಡಿಸುವ ಅರಣ್ಯ ಇಲಾಖೆ ಭರವಸೆ ನೀಡಿದೆ.ಈ ಬಗ್ಗೆ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!