ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣವಾಗಿರುವ ಮುಳ್ಳಯ್ಯನಗಿರಿ ಬೆಟ್ಟಗಳ ತಪ್ಪಲಿನಲ್ಲಿ ಕಾಡ್ಗಿಚ್ಚು ವ್ಯಾಪಿಸಿ ನೂರಾರು ಹೆಕ್ಟೇರ್ ಅರಣ್ಯವನ್ನು ಸುಟ್ಟು ಹಾಕಿದೆ.

ಮುಳ್ಳಯ್ಯನಗರಿ ಸಮೀಪದ ಬೈರೆಗುಡ್ಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಹೆಕ್ಟೇರ್ ಅರಣ್ಯ ನಾಶವಾಗಿದೆ. ಬೈರೇಗುಡ್ಡ ಬಳಿ ಕಾಣಿಸಿಕೊಂಡ ಕಾಡ್ಗಿಚ್ಚು ಬೆಟ್ಟದಿಂದ ಗುಡ್ಡಕ್ಕೆ ವ್ಯಾಪಿಸಿದ್ದು, ಕವಿಕಲ್ ಗಂಡಿ ಅರಣ್ಯಕ್ಕೂ ವ್ಯಾಪಿಸಿದೆ.

ಕಾಡ್ಗಿಚ್ಚಿನ ಸ್ಥಳವನ್ನು ತಲುಪಲು ಅರಣ್ಯ ಪೊಲೀಸರು ಕಷ್ಟಪಡುತ್ತಿದ್ದಾರೆ. ಬೈರೆಗುಡ್ಡ ಅತ್ಯಂತ ಎತ್ತರದ, ಅರಣ್ಯ ಮತ್ತು ಕಡಿದಾದ ಪ್ರದೇಶವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಬೀಸಿದ ಬಲವಾದ ಗಾಳಿಗೆ ಅರಣ್ಯ ಪ್ರದೇಶಗಳು ಸುಟ್ಟು ಕರಕಲಾಗಿವೆ.

ಸದ್ಯದ ಮಾಹಿತಿ ಪ್ರಕಾರ ಅರಣ್ಯಕ್ಕೆ ಸ್ಥಳೀಯರೇ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!