ಪಲ್ನಾಡು ಅರಣ್ಯದಲ್ಲಿ ‌ʻಆಪರೇಷನ್‌ ಟೈಗರ್ಸ್ʼ:‌ ಸಿಸಿಟಿವಿ ಕಣ್ಗಾವಲಿನಲ್ಲಿ ಹುಲಿ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಲ್ನಾಡು ಅರಣ್ಯ ಪ್ರದೇಶದಲ್ಲಿ ಆಪರೇಷನ್ ಟೈಗರ್ಸ್ ಕಾರ್ಯಾಚರಣೆ ಮುಂದುವರಿದಿದೆ. ವೆಲ್ದುರ್ತಿ, ದುರ್ಗಿ, ಕಾರಂಪುಡಿ, ಬೊಳ್ಳಪಲ್ಲಿ ಮಂಡಲಗಳಲ್ಲಿ ನಡೆಯುತ್ತಿರುವ ಹುಲಿ ಶೋಧ ಕಾರ್ಯಾಚರಣೆಗಾಗಿ ಅಧಿಕಾರಿಗಳು ಮಾಚಾರ್‌ನಲ್ಲಿ ಬೀಡುಬಿಟ್ಟಿದ್ದಾರೆ. 100 ಕಿ.ಮೀ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಕಂಡ್ರಿಕ, ಕನುಮಲ ಚೆರುವು, ಕಾಕಿರಾಳ ಆದಿ ರಿಚಾಲ, ಲೋಯಪಲ್ಲಿ ಗ್ರಾಮಗಳಲ್ಲೂ ಶೋಧ ಮುಂದುವರಿದಿದೆ. ಹುಲಿ ಶೋಧ ಕಾರ್ಯಾಚರಣೆಯಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಹುಲಿಗಳ ಪತ್ತೆಗೆ ಅರಣ್ಯ ಅಧಿಕಾರಿಗಳು ಅತ್ಯಾಧುನಿಕ ಕ್ಯಾಮೆರಾಗಳನ್ನು ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಹುಲಿಯ ಕುರುಹು ಸಿಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಕೆಲ ದಿನಗಳಿಂದ ಪಲ್ನಾಡು ಜಿಲ್ಲೆಯ ನಲ್ಲಮಲ ಮೀಸಲು ಅರಣ್ಯದ ಬಳಿಯ ಕೆಲ ಪ್ರದೇಶಗಳ ಜನರಿಗೆ ಹುಲಿಗಳ ಓಡಾಟದಿಂದ ಭಯಭೀತರಾಗಿದ್ದಾರೆ. ಇತ್ತೀಚೆಗಷ್ಟೇ ದುರ್ಗಿ ಮಂಡಲದ ಕಾಕಿರಾಳ ಮತ್ತು ಅಡಿಗೊಪ್ಪುಳ ಅರಣ್ಯ ಪ್ರದೇಶದಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಹತ್ಯೆ ಮಾಡಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದರಿಂದ ದುರ್ಗಿ, ಕಾರಂಪುಡಿ, ಬೊಳ್ಳಪಲ್ಲಿ ಮಂಡಲದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಪಲ್ನಾಡಿನ ಲೋಯಪಲ್ಲಿ, ಗಜಪುರಂ ಮತ್ತು ವೆಲ್ದುರ್ತಿ, ದುರ್ಗಿ, ಕಾರಂಪುಡಿ ಮತ್ತು ಬೊಳ್ಳಪಲ್ಲಿ ಮಂಡಲಗಳ ಅರಣ್ಯ ಪ್ರದೇಶಗಳಲ್ಲಿ, ಹುಲಿಗಳು ಆಹಾರ ಮತ್ತು ನೀರಿಗಾಗಿ ಹೊಲ ಮತ್ತು ತೊರೆಗಳ ಉದ್ದಕ್ಕೂ ಸುತ್ತಾಡುತ್ತವೆ.

ನಾಗಾರ್ಜುನಸಾಗರ-ಶ್ರೀಶೈಲಂ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸುಮಾರು 75 ಹುಲಿಗಳಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಪಲ್ನಾಡು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 44 ಬೀಟ್‌ಗಳಿವೆ. ಇತ್ತೀಚೆಗೆ ಹುಲಿಗಳ ಓಡಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಯಾ ಪ್ರದೇಶದ ಅರಣ್ಯಾಧಿಕಾರಿಗಳು ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!