ದಿಗಂತ ವರದಿ ವಿಜಯಪುರ:
ನಗರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ನಿವಾಸದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಹುಲಿ ಉಗುರಿನ ಲಾಕೇಟ್ ಗಾಗಿ ಮನೆಯಲ್ಲಿ ಹುಡುಕಾಟ ನಡೆಸಿದರು.
ವಿಜುಗೌಡ ಪುತ್ರ ಶಾಶ್ವತ ಪಾಟೀಲ ಕೊರಳಲ್ಲಿ ಧರಿಸಿದ್ದ ಹುಲಿ ಉಗುರಿನ ಲಾಕೇಟ್ ಇದ್ದ ಪೋಟೋಗಳು ವೈರಲ್ ಆಗಿದ್ದವು. ಪೋಟೋ ವೈರಲ್ ಆದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ್ದ ವಿಜುಗೌಡ ಪಾಟೀಲ್, ಬೇಕಿದ್ದರೇ ತನಿಖೆಗೆ ರೆಡಿ ಇದ್ದೇನೆ ಎಂದರು. ಅಲ್ಲದೇ, ಈಗ ವಿಜುಗೌಡ ನಿವಾಸದಲ್ಲಿ ಹುಲಿ ಉಗುರು ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.