ಅರಣ್ಯ ನಿಯಮ ಉಲ್ಲಂಘನೆ: ಕಾಂತಾರ ಚಾಪ್ಟರ್ -1 ನಿರ್ಮಾಪಕರಿಗೆ ರೂ. 50,000 ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

2022ರ ಬ್ಲಾಕ್ ಬಸ್ಟರ್ ಕಾಂತಾರ ಪ್ರೀಕ್ವೆಲ್ ಕಾಂತಾರ ಚಾಪ್ಟರ್ -1 ಕನ್ನಡ ಸಿನಿಮಾದ ಚಿತ್ರೀಕರಣದ ವೇಳೆ ಸಕಲೇಶಪುರ ಅರಣ್ಯದಲ್ಲಿ ಅಕ್ರಮವಾಗಿ ಶೂಟಿಂಗ್ ಸೆಟ್ ವಸ್ತುಗಳನ್ನು ಸುರಿದಿದ್ದಕ್ಕಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಗೆ ಅರಣ್ಯ ಇಲಾಖೆ ಅಧಿಕಾರಿಗಳು ರೂ. 50,000 ದಂಡ ವಿಧಿಸಿದ್ದಾರೆ.

ರಿಷಭ್ ಶೆಟ್ಟಿ ನಿರ್ದೇಶನದ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸ್ಫೋಟಿಸಿ, ಮರಗಳನ್ನು ಕಡಿದಿರುವ ಆರೋಪ ಕೂಡಾ ಚಿತ್ರತಂಡದ ಮೇಲಿದೆ. ಸಕಲೇಶಪುರ ಅರಣ್ಯದ ಸರ್ವೇ ಸಂಖ್ಯೆ 131 ರ ಡೀಮ್ಡ್ ಫಾರೆಸ್ಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹಾಸನ ಅರಣ್ಯ ಸಂರಕ್ಷಣಾಧಿಕಾರಿ ವಿ ಯೆಡುಕೊಂಡಲನ್ , ಚಿತ್ರ ತಂಡ ಷರತ್ತು ಪಡೆಯುವ ಮುನ್ನ ಅರಣ್ಯದ ಒಳಗಡೆ ಸಾಮಾಗ್ರಿಗಳನ್ನು ಸುರಿದಿದ್ದರು. ಇದು ಅತಿಕ್ರಮಣಕ್ಕೆ ಸಮಾನವಾಗಿದ್ದು, ಕರ್ನಾಟಕ ಅರಣ್ಯ ಕಾಯ್ದೆಯಡಿ ಅವರಿಗೆ 50,000 ರೂ. ದಂಡ ವಿಧಿಸಲಾಗಿದೆ. ಕೆಲವು ದಿನಗಳ ನಂತರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ.

ಹಾಸನ ಡಿಸಿಎಫ್ ಸೌರಭ್ ಕುಮಾರ್ ಮಾತನಾಡಿ, ಜನವರಿ 1 ರಂದು ಅನುಮತಿಗಾಗಿ ಯೂನಿಟ್ ಅರ್ಜಿ ಸಲ್ಲಿಸಿತು. ಆದರೆ ಇಲಾಖೆಯನ್ನು ಸಂಪರ್ಕಿಸುವ ಮೊದಲೇ ಅವರು ಕಾಡಿನೊಳಗೆ ವಸ್ತುಗಳನ್ನು ಸುರಿದಿದ್ದರು. ಜನವರಿ 3 ರಂದು ಸ್ಥಳವನ್ನು ಪರಿಶೀಲಿಸಲಾಯಿತು. ಜನವರಿ 4 ರಂದು ಎಫ್‌ಐಆರ್ ದಾಖಲಿಸಲಾಯಿತು. ಈ ಕುರಿತು ವಿವರವಾದ ತನಿಖೆ ನಡೆಸಲಾಗುತ್ತಿದೆ ಮತ್ತು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು, ಬಳಿಕ ಚಿತ್ರೀಕರಣ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!