ಹೊಸದಿಂಗತ ಡಿಜಿಟಲ್ ಡೆಸ್ಕ್:
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದ್ದು, ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣಾಗಿದೆ.
ಇದಕ್ಕೆ ಕಾರಣ 20213ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಗೆಲ್ಲುವ ಸುವರ್ಣ ಅವಕಾಶ ಭಾರತದ ಕೈಯಲ್ಲಿತ್ತು.
ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್, ಐಸಿಸಿ ವಿಶ್ವಕಪ್, ಟಿ20, ಏಷ್ಯಾಕಪ್, ಚಾಂಪಿಯನ್ ಟ್ರೋಫಿ ಸೇರದಂತೆ ಯಾವುದೇ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ಗೆಲುವು ಸಾಧಿಸಲು ವಿಫಲವಾಗಿದೆ.
ಆದ್ರೆ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಪ್ರದರ್ಶನ ನೀಡಲು ಮರೆಯುವುದಿಲ್ಲ ಎಂದು ಅಭಿಮಾನಿಗಳ ವಾದ . ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೇ ನೀವು ಟೆಸ್ಟ್ ಫೈನಲ್ ಮರೆತು ಬಿಡಿ. ಐಪಿಎಲ್ 2024ರ ಟೂರ್ನಿ ಆರಂಭಕ್ಕೆ ಇನ್ನು 10 ತಿಂಗಳು ಮಾತ್ರ ಎಂದು ಟೀಂ ಇಂಡಿಯಾವನ್ನು ಟ್ರೋಲ್ ಮಾಡಲಾಗಿದೆ.
ಟೀಂ ಇಂಡಿಯಾ ಆಟಗಾರರಿಗೆ ಐಪಿಎಲ್ ಒಂದು ಬಿಟ್ಟರೇ ಇನ್ನೇನು ಚಿಂತೆ ಇಲ್ಲ. ಎಲ್ಲರೂ ಶಕ್ತಿಮೀರಿ ಐಪಿಎಲ್ ಟೂರ್ನಿಯಲ್ಲಿ ಆಡುತ್ತಾರೆ. ಐಪಿಎಲ್ ಟೂರ್ನಿ ವೇಳೆ ಎಲ್ಲರೂ ಫಿಟ್ ಆಗುತ್ತಾರೆ. ಈ ಬಾರಿ ಟ್ರೋಫಿ ಗೆಲ್ಲುವ ಅತ್ಯುತ್ತಮ ಅವಕಾಶವನ್ನೇ ಟೀಂ ಇಂಡಿಯಾ ಕೈಯಾರೆ ದೂರ ಮಾಡಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.