ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯಕ್ಕೆ ಮಾಲ್ಡೀವ್ಸ್ ಹಾಗೂ ಭಾರತ ನಡುವಣ ಉದ್ವಿಗ್ನತೆ ಕಡಿಮೆಯಾಗಿಲ್ಲ. ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದನ್ನು ಮೊಹಮ್ಮದ್ ಮಯಿಝು ಆಪ್ತ ಸಚಿವರು ಟೀಕೆ ಮಾಡಿದ್ದರು.
ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ನಶೀದ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತಕ್ಕೆ ಬಂದು ಭಾರತದ ಜನರಿಗೆ ಕ್ಷಮೆ ಕೋರಿದ್ದಾರೆ.
ಎರಡೂ ದೇಶಗಳ ನಡುವಣ ಉದ್ವಿಗ್ನತೆ ಮಾಲ್ಡೀವ್ಸ್ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಅದರ ಬಗ್ಗೆ ನಾನು ಕಳವಳಗೊಂಡಿದ್ದೇನೆ. ಮಾಲ್ಡೀವ್ಸ್ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಅಹಿತಕರ ಬೆಳವಣಿಗೆ ನಡೆದಿದೆ, ಆದರೆ ನಾವು ಕ್ಷಮೆ ಕೇಳುತ್ತೇವೆ. ಭಾರತೀಯರು ರಜಾದಿನಗಳಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಬೇಕು. ನಾವು ಆತಿಥ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.