ವಿದ್ಯುತ್ ಬಳಕೆಯಲ್ಲಿ ತನ್ನ ಎಲ್ಲಾ ದಾಖಲೆ ಪುಡಿಗಟ್ಟಿ ಮುಂದಕ್ಕೆ ಸಾಗುತ್ತಿದೆ ಸಿಲಿಕಾನ್ ಸಿಟಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ ತಿಂಗಳಿನಲ್ಲಿ 8,128 ಮೆಗಾ ವ್ಯಾಟ್ ವಿದ್ಯುತ್ ಬಳಸುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರು ಇದುವರೆಗಿನ ಎಲ್ಲಾ ದಾಖಲೆ ಪುಡಿಗಟ್ಟಿ ಹೊಸ ದಾಖಲೆ ಬರೆದಿದೆ!

ಬಿಸಿಲಿನ ತಾಪ ಹೆಚ್ಚುತ್ತಿರುವಂತೆ ಬೆಂಗಳೂರಿಗರು ಈಗ ಹೆಚ್ಚು ಹೆಚ್ಚಾಗಿ ಫ್ಯಾನ್, ಏರ್ ಕಂಡಿಷನ್, ಏರ್ ಕೂಲರ್‌ಗಳ ಮೊರೆಹೋಗುತ್ತಿದ್ದು, ವಿದ್ಯುತ್ ಬಳಕೆ ಕೂಡಾ ವಾತಾವರಣದ ಉಷ್ಣಾಂಶದಂತೆಯೇ ಏರಿಕೆಯಾಗುತ್ತಿದೆ.

ಇಲಾಖೆ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಫೆಬ್ರವರಿಯಲ್ಲಿ 7,496 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ 8,128 ಮೆಗಾ ವ್ಯಾಟ್ ಬಳಕೆಯಾಗಿದೆ. ಈ ಮೂಲಕ ಬೆಂಗಳೂರು ಕಳೆದ ಬಾರಿಯ ತನ್ನದೇ ರೆಕಾರ್ಡ್ ಬ್ರೇಕ್ ಮಾಡಿದೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!