ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಪಿರಾಮಿಡ್ ಜ್ಞಾನ ಕೇಂದ್ರದಲ್ಲಿ ಬಿಜೆಪಿಯ ಕಲೆ ಹಾಗೂ ಸಾಂಸ್ಕೃತಿಕ ಪ್ರಕೋಷ್ಠಕದ ವತಿಯಿಂದ ಕರ್ನಾಟಕ ರಾಜೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನಕ್ಕೆ ಮಾಜಿಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಅಷ್ಟೇ ಅಲ್ಲ ಕನ್ನಡಿಗರಿರುವ ರಾಜ್ಯ ಹಾಗೂ ದೇಶದಲ್ಲಿ ಕನ್ನಡ ಅಭಿಮಾನ ಸ್ಪೂರ್ತಿಯಾಗಿ ಹಾಡುವುದು ನಡೆಯುತ್ತಿದೆ ಎಂದರು.
ಕಳೆದ ವರ್ಷ ಕೋಟ್ಯಾಂತರ ಜನ, ಸಂಘ ಸಂಸ್ಥೆಗಳು ಭಾಗವಹಿಸಿ ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕವಿಗಳ ಬರೆದ ಆರು ಹಾಡುಗಳು ಹಾಡಲಾಗುತ್ತಿದೆ. 1.10 ಲಕ್ಷ ಜನ ಭಾಗವಹಿಸುತ್ತಿದ್ದಾರೆ. ಕನ್ನಡರಿಗರ ಸ್ಪಂದನೆ ಅಷ್ಟೇ ದೊರಕಿದೆ ಎಂದು ತಿಳಿಸಿದರು.
ನಾಡಿನಲ್ಲಿ ಕನ್ನಡದ ಕೂಗು ದೊಡ್ಡ ಪ್ರಮಾಣದಲ್ಲಿ ಏಳುವಂತಾಗಿದೆ. 26 ರಾಜ್ಯಗಳಲ್ಲಿ, 46 ದೇಶಗಳಲ್ಲಿ, ಸಾವಿರಾರು ಕಡೆ ಕೋಟಿ ಕಂಠ ಗಾಯನ ನಡೆಯುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಭಾಗವಹಿಸುತ್ತಿವೆ ಎಂದರು.
ಮಾಜಿ ಹುಡಾ ಅಧ್ಯಕ್ಷ ನಾಗೇಶ ಕಲಬುರಗಿ,ಬಿಜೆಪಿ ಶಿಸ್ತು ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾಹುಕಾರ, ರವಿ ನಾಯಕ, ದತ್ತಮೂರ್ತಿ ಕುಲಕರ್ಣಿ ಮಹೇಂದ್ರ ಕೌತಾಳ ಇದ್ದರು.