ಹೊಸದಿಗಂತ ವರದಿ, ವಿಜಯಪುರ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿಯಿರೋ ಹಿರಿಯ ರಾಜಕಾರಣಿ. ಲಘುವಾಗಿ ಗುರು ಸ್ಥಾನದಲ್ಲಿರುವವರ ಬಗ್ಗೆ ಮಾತನಾಡಬಾರದು ಎಂದು ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿ ಮಹಾದೇವ ಶಿವಾಚಾರ್ಯರು ಹೇಳಿದರು.
ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಠಾಧೀಶರು, ಸಂತರು, ಸ್ವಾಮೀಜಿಗಳ ಬಗ್ಗೆ ಮಾತನಾಡೋದು ಶೋಭೆಯಲ್ಲ. ಜಗತ್ತಿಗೆ ಗುರು ಸ್ಥಾನ ಬಹಳ ಪವಿತ್ರ, ಶ್ರೇಷ್ಠ ಎಂದರು.
ಸಿದ್ದರಾಮಯ್ಯ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ಉಳಿದ ರಾಜಕಾರಿಣಿಗಳು ಏನಾದರೂ ಮಾತನಾಡಿದರೆ ನಡೆಯುತ್ತೆ. ಓಲೈಕೆ ರಾಜಕಾರಣ ಮಾಡೋದು ಸರಿಯಲ್ಲ ಎಂದರು.
ಈ ರೀತಿ ಮಾತನಾಡಿದರೆ ಓಲೈಕೆನೂ ಆಗೋದಿಲ್ಲ. ಪೂಜ್ಯರನ್ನು ನಿಂದಿಸಿ ಓಲೈಕೆ ಮಾಡೋಕೆ ಹೋದರೆ ಯೋಗ್ಯ ಪರಿಹಾರ ಸಿಗಲ್ಲ ಎಂದರು.