ರಾಜಕೀಯ ಅಖಾಡಕ್ಕೆ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಎಂಟ್ರಿ: ದೀದಿಗೆ ಹೇಳಿದ್ರು ಥ್ಯಾಂಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಲೋಕಸಭಾ ಚುನಾವಣಾ ಅಖಾಡಕ್ಕೆ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಎಂಟ್ರಿಕೊಟ್ಟಿದ್ದು, ತೃಣಮೂಲ ಕಾಂಗ್ರೆಸ್ ಯೂಸುಫ್ ಪಠಾಣ್ ಅವರಿಗೆ ಬಹರಂಪುರದಿಂದ ಟಿಕೆಟ್ ಕೊಟ್ಟಿದೆ.

ಹೀಗಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಕೃತಜ್ಞತೆ ಸಲ್ಲಿಸಿದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ‘ಸಂಸತ್ತಿನಲ್ಲಿ ಜನರ ಧ್ವನಿಯಾಗಲು ನನ್ನ ಮೇಲಿಟ್ಟ ನಂಬಿಕೆಗಾಗಿ ಧನ್ಯವಾದ’ ಎಂದು ತಿಳಿಸಿದ್ದಾರೆ.

‘ನನ್ನನ್ನು ಟಿಎಂಸಿ ಕುಟುಂಬಕ್ಕೆ ಸ್ವಾಗತಿಸಿದ ಮತ್ತು ಸಂಸತ್ತಿನಲ್ಲಿ ಜನರ ಧ್ವನಿಯಾಗುವ ಜವಾಬ್ದಾರಿಯೊಂದಿಗೆ ನನ್ನನ್ನು ನಂಬಿದ್ದಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿಗೆ ನಾನು ಚಿರಋಣಿಯಾಗಿದ್ದೇನೆ’ ಎಂದರು.

‘ಜನರ ಪ್ರತಿನಿಧಿಗಳಾಗಿ, ಬಡವರು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾದವರನ್ನು ಮೇಲಕ್ಕೆತ್ತುವುದು ನಮ್ಮ ಕರ್ತವ್ಯ ಮತ್ತು ಅದನ್ನೇ ನಾನು ಸಾಧಿಸಲು ಆಶಿಸುತ್ತೇನೆ’ ಎಂದರು.

ಇತ್ತ ತಮ್ಮ ಸಹೋದರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ತಿಳಿಸಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ‘ನಿಮ್ಮ ತಾಳ್ಮೆ, ದಯೆ, ಅಗತ್ಯವಿರುವವರಿಗೆ ಸಹಾಯ ಮಾಡಿ ಮತ್ತು ದೊಡ್ಡ ಸ್ಥಾನವಿಲ್ಲದಿದ್ದರೂ ಜನರ ಸೇವೆಯನ್ನು ಸುಲಭವಾಗಿ ಗಮನಿಸಬಹುದು. ಒಮ್ಮೆ ನೀವು ರಾಜಕೀಯಕ್ಕೆ ಕಾಲಿಟ್ಟರೆ, ನೀವು ನಿಜವಾಗಿಯೂ ಜನರ ದೈನಂದಿನ ಜೀವನದಲ್ಲಿ ಒಂದು ಮಹತ್ವದ ಬದಲಾವಣೆಯನ್ನು ತರುತ್ತೀರಿ ಎಂದು ನನಗೆ ವಿಶ್ವಾಸವಿದೆ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!