ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಫ್ಲಾಗ್‌ಸ್ಟಾಫ್ ರಸ್ತೆಯ ಸರ್ಕಾರಿ ನಿವಾಸವನ್ನು ತೆರವು ಮಾಡಿ ದೆಹಲಿ ಲುಟ್ಯೆನ್ಸ್ ವಲಯದಲ್ಲಿರುವ ತಮ್ಮ ಪಕ್ಷದ ನಾಯಕ ಅಶೋಕ್ ಮಿತ್ತಲ್ ಅವರ ಮನೆಗೆ ತೆರಳಿದ್ದಾರೆ.
ಕೇಜ್ರಿವಾಲ್ ಜೊತೆಗೆ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿ ಮನೆಯಿಂದ ತೆರಳಿದ್ದಾರೆ. ತೆರಳುವ ಮುನ್ನ ಮನೆಯ ಕೆಲಸದ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅವರ ಕುಟುಂಬವು ಮಂಡಿ ಹೌಸ್ ಬಳಿಯ ಫಿರೋಜ್‌ಶಾ ರಸ್ತೆಯಲಿರುವ ಪಕ್ಷದ ಸದಸ್ಯ, ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸಕ್ಕೆ ತೆರಳಿದ್ದು,ಮಿತ್ತಲ್ ಅವರು ಪಂಜಾಬ್‌ನ ಸಂಸದರಾಗಿದ್ದಾರೆ.
ಗುರುವಾರದಿಂದ ಆರಂಭವಾದ ಮಂಗಳಕರ ನವರಾತ್ರಿ ಅವಧಿಯಲ್ಲಿ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡುವುದಾಗಿ ಅವರು ಈ ಹಿಂದೆ ಹೇಳಿದ್ದರು.