ಶ್ರೀರಾಮನ ಭಜನೆ ಮಾಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಶ್ರೀರಾಮನ ಭಜನೆ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನಸೆಳೆಯುತ್ತಿದೆ.

ಈ ಹಿಂದೆ ಜನವರಿಯಲ್ಲಿ ರಾಮಲಲ್ಲಾ ಪಟ್ಟಾಭಿಷೇಕದ ತಯಾರಿ ವೇಳೆ ಅವರು ಭಜನೆ ಹಾಡುವ ವಿಡಿಯೋ ಸುದ್ದಿ ಮಾಡಿತ್ತು. ಇದಲ್ಲದೆ ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಜೊತೆಗಿನ ಸಂದರ್ಶನವೊಮದರಲ್ಲಿಯೂ ಅವರು ರಾಮನ ಭಜನೆ ಹಾಡಿದ್ದರು.

ಅಷ್ಟೇ ಅಲ್ಲದೆ ಶ್ರೀರಾಮನ ತಂದೆ ತನ್ನ ಎರಡನೇ ಪತ್ನಿ ಕೈಕೇಯಿಗೆ ಆಕೆ ಏನು ಕೇಳಿದರೂ ಕೊಡುತ್ತೇನೆ ಎಂದು ಭರವಸೆ ನೀಡಿದಾಗ ಆಕೆ ಅಯೋಧ್ಯೆಯ ಸಿಂಹಾಸನ ಕೇಳಿದ್ದು, ಅದನ್ನು ಶ್ರೀರಾಮ ವಿರೋಧಿಸದೇ ಇದ್ದುದು ಇವೆಲ್ಲವನ್ನೂ ಅವರು ಹಂಚಿಕೊಂಡಿದ್ದರು.

ಇದೀಗ ಮಹಿಳೆಯರ ಪಕ್ಕ ಸೋಫಾದಲ್ಲಿ ಕುಳಿತಿರುವ ಫಾರೂಕ್ ಅಬ್ದುಲ್ಲಾ ಅವರು ಶ್ರೀರಾಮ ಭಜನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!