ತಲೆಮರೆಸಿಕೊಂಡಿದ್ದ ಕೇರಳ ಪಿಎಫ್‌ಐ ಮಾಜಿ ಕಾರ್ಯದರ್ಶಿ ರಾವೂತ್‌ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಿಎಫ್‌ಐ ಮೇಲೆ ದೇಶದಾದ್ಯಂತ ದಾಳಿ ನಡೆದ ಸಂದರ್ಭದಲ್ಲಿ ತಲೆ ಮರೆಸಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕೇರಳದ ಮಾಜಿ ಕಾರ್ಯದರ್ಶಿ ರವೂಫ್ ಎಂಬಾತನನ್ನು ಕೇರಳ ಪೋಲೀಸರು ಬಂಧಿಸಿದ್ದಾರೆ. . ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದಲ್ಲಿ ದಾಳಿ ನಡೆಸಿದ ದಿನದಿಂದಲೂ ರವೂಫ್ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ನಿಖರ ಮಾಹಿತಿ ಪಡೆದ ಪೋಲೀಸರು ಗುರುವಾರ ರಾತ್ರಿ ಪಾಲಕ್ಕಾಡ್‌ನಲ್ಲಿರುವ ಆತನ ಮನೆಯಿಂದ ಆತನನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಜಾರಿ ನಿರ್ದೇಶನಾಲಯ (ED), ಮತ್ತು ರಾಜ್ಯ ಪೊಲೀಸರು ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 27 ರಂದು ಎರಡು ಬಾರಿ ದಾಳಿಗಳನ್ನು ನಡೆಸಿದರು. ಮೊದಲ ಸುತ್ತಿನಲ್ಲಿ, 106 PFI ಸದಸ್ಯರನ್ನು ಬಂಧಿಸಲಾಯಿತು. ಏತನ್ಮಧ್ಯೆ, ಎರಡನೇ ಸುತ್ತಿನ ದಾಳಿಯಲ್ಲಿ 247 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಯಿತು.

“ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದಂತಹ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ PFI ಯ ಅಂತರಾಷ್ಟ್ರೀಯ ಸಂಪರ್ಕಗಳ ನಿದರ್ಶನಗಳಿವೆ” ಎಂದು ಗೃಹ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ..

ಪಿಎಫ್‌ಐ ದಮನ ಮತ್ತು ಸಂಘಟನೆಯ ಹಲವು ಉನ್ನತ ಮಟ್ಟದ ನಾಯಕರ ಬಂಧನದ ಒಂದು ತಿಂಗಳ ನಂತರ, ತಲೆಮರೆಸಿಕೊಂಡಿರುವ ಕೇರಳದ ಮಾಜಿ ಕಾರ್ಯದರ್ಶಿ ರವೂಫ್ ನನ್ನು ಗುರುವಾರ ರಾತ್ರಿ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!