Saturday, June 10, 2023

Latest Posts

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿ ದೇಶ ತೊರೆಯದಂತೆ ಸರ್ಕಾರ ನಿಷೇಧ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಪಾಕಿಸ್ತಾನದ ಶಹಬಾಜ್ ಸರ್ಕಾರ ನಿರ್ಬಂಧಿಸಿದ್ದು,  ದೇಶವನ್ನು ತೊರೆಯದಂತೆ ನಿಷೇಧಿಸಲಾಗಿದೆ.

ಅವರು ಇನ್ಮುಂದೆ ದೇಶ ತೊರೆಯಲು ಸಾಧ್ಯವಾಗುವುದಿಲ್ಲ. ಕೆಲವು ದಿನಗಳ ಹಿಂದೆ, ಶಹಬಾಜ್ ಸರ್ಕಾರ ಇಮ್ರಾನ್ ಖಾನ್ ಅವರಿಗೆ ಎರಡು ಸ್ಥಳಗಳನ್ನು ನೀಡಿದ್ದು, ಅವರು ಬಯಸಿದರೆ, ದುಬೈ ಅಥವಾ ಲಂಡನ್ ಗೆ ಹೋಗಬಹುದಾಗಿತ್ತು, ಆದ್ರೆ ಇದಕ್ಕೆ ವಿರುದ್ಧವಾಗಿ, ಇಮ್ರಾನ್ ಖಾನ್ ದೇಶವನ್ನು ತೊರೆಯದಂತೆ ನಿಷೇಧಿಸಲಾಗಿದೆ.

ಇಮ್ರಾನ್ ಮಾತ್ರವಲ್ಲ, ಅವರ ಪಕ್ಷ ತೆಹ್ರೀಕ್-ಇ-ಇನ್ಸಾಫ್ ಅಂದರೆ ಪಿಟಿಐನ 80 ಸದಸ್ಯರ ಮೇಲೂ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪಕ್ಷದ ಈ 80 ಸದಸ್ಯರನ್ನು ನೋ-ಫ್ಲೈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಮ್ರಾನ್ ಖಾನ್ ಅವರೊಂದಿಗೆ, ಅವರ ಪತ್ನಿ ಬುಶ್ರಾ ಬೀಬಿ ಕೂಡ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳಲ್ಲಿ ಸಿಲುಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!