ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಪತಿ ದೇವಿಂಗ್ ಸಿಂಗ್ ಶೇಖಾವತ್ ಇಂದು ನಿಧನರಾಗಿದ್ದಾರೆ. 89 ವರ್ಷದ ದೇವಿಸಿಂಗ್ ಕಿಡ್ನಿ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.
ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
‘ಕಠಿಣ ಪರಿಸ್ಥಿತಿಯಲ್ಲಿ ನಾನು ಪ್ರತಿಭಾಸಿಂಗ್ ಪಾಟೀಲ್ ಕುಟುಂಬ ಜೊತೆ ನಿಲ್ಲುತ್ತೇನೆ. ದೇವಿಸಿಂಗ್ ನಿಸ್ವಾರ್ಥ ಸೇವೆ ಮೂಲಕ ಸಮಾಜದಲ್ಲಿ ಛಾಪು ಮೂಡಿಸಿದ್ದಾರೆ. ಓಂ ಶಾಂತಿ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ದೇವಿಸಿಂಗ್ ಶೇಖಾವತ್ ಕಾಂಗ್ರೆಸ್ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಾಗಿ ಗುರುತಿಸಿಕೊಂಡಿದ್ದ ದೇವಿಸಿಂಗ್ ಶೇಖಾವತ್ ಹೆಚ್ಚು ಸುದ್ದಿಯಾಗಿದ್ದು. ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾದ ಬಳಿಕ. ಪ್ರತಿಭಾ ಪಾಟೀಲ್ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು.