ಫ್ರಿಡ್ಜ್​, ಸೂಟ್​ಕೇಸ್​, ಅಕ್ರಮ ಮದುವೆ, ಮತಾಂತರ ಎಂದವರಿಗೆ ನಟಿ ಸ್ವರಾ ಭಾಸ್ಕರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೇ ದಿನಗಳ ಹಿಂದೆ ಫಹಾದ್ ಅಹ್ಮದ್​ ಜೊತೆ ಮದುವೆಯಾದ ನಟಿ ಸ್ವರಾ ಭಾಸ್ಕರ್​ ಅವರು ಅಂತರಧರ್ಮೀಯ ಮದುವೆ ಆಗಿದ್ದಾರೆ ಎಂದು ನೆಟ್ಟಿಗರು ಇವರನ್ನು ಟ್ರೋಲ್​ ಮಾಡುತ್ತಿದ್ದಾರೆ.

ಇದಕ್ಕಾಗಿ ಅವರನ್ನು ದೆಹಲಿಯಲ್ಲಿ ಮುಸ್ಲಿಂ ಪ್ರಿಯಕರನಿಂದ ಕೊಲೆಯಾದ ಹಿಂದು ಯುವತಿ ಶ್ರದ್ಧಾ ವಾಕರ್​ ರೀತಿಯೇ ಸ್ವರಾ ಭಾಸ್ಕರ್​ ಅವರಿಗೂ ಆಗಲಿದೆ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ.

ಆದ್ರೆ ಅಂಥ ಮಾತುಗಳಿಗೆ ಈ ದಂಪತಿ ತಲೆ ಕೆಡಿಸಿಕೊಂಡಿಲ್ಲ. ಹೊಸ ಫೋಟೋಗಳನ್ನು ಹಂಚಿಕೊಳ್ಳುವ ತಿರುಗೇಟು ನೀಡಿದ್ದಾರೆ. ತಮ್ಮ ನಗುವಿನ ಮೂಲಕವೇ ಅವರು ಎಲ್ಲ ಟ್ರೋಲ್​ಗಳನ್ನು ಎದುರಿಸುತ್ತಿದ್ದಾರೆ. ಇಬ್ಬರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

‘ದ್ವೇಷಿಸುವವರು ಫ್ರಿಡ್ಜ್​, ಸೂಟ್​ಕೇಸ್​, ಅಕ್ರಮ ಮದುವೆ, ಮತಾಂತರ, ಅದು ಇದು ಅಂತಾರೆ. ಆದರೆ ತಾವು ಸಖತ್​ ಖುಷಿಯಾಗಿ ಇರುವುದಾಗಿ’ ಸ್ವರಾ ಭಾಸ್ಕರ್​ ಅವರು ಟ್ವೀಟ್​ ಮಾಡಿದ್ದಾರೆ .

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!