ಕುಕ್ಕೆ ಸಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಭೇಟಿ: ಮೈತ್ರಿ ಬಗ್ಗೆ ಹೇಳಿದ್ದೇನು?

ಹೊಸದಿಗಂತ ವರದಿ ಸುಬ್ರಹ್ಮಣ್ಯ:

ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೋಮವಾರ ಭೇಟಿ ನೀಡಿದ್ದರು.

ಆದಿತ್ಯವಾರ ದಿನ ಸಕಲೇಶಪುರ ಭಾಗದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿತ್ತು, ಹೆಲಿಕಾಪ್ಟರ್ ಬರಲು ಅನಾನುಕುಲ ವಾತಾವರಣ ಉಂಟಾಗಿದ್ಧ ಹಿನ್ನೆಲೆಯಲ್ಲಿ ಮಂಗಳೂರಿನವರೆಗೆ ವಿಮಾನದಲ್ಲಿ ಆಗಮಿಸಿ , ಅಲ್ಲಿಂದ ಸುಮಾರು ರಾತ್ರಿ 11:30ಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿ ವಾಸ್ತವ್ಯ ಹೂಡಿದ್ದರು. ಆದಿತ್ಯವಾರ ಶ್ರೀ ದೇವಳದಲ್ಲಿ ಆಶ್ಲೇಷ ಬಲಿ,ತುಲಾಭಾರ ಮತ್ತು ಮಹಾಪೂಜೆ ಸೇವೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಮಾರಸ್ವಾಮಿಯವರು ಈಗಾಗಲೇ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ ಸೀಟು ಹಂಚಿಕೆಯ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೆ. ದಸರಾ ಕಳೆದು ಸೀಟು ಹಂಚಿಕೆ ಚರ್ಚೆ ನಡೆಯಲಿದೆ
ಸೆಷನ್ ಕಳೆದು ನನ್ನ ಆರೋಗ್ಯ ಸುಧಾರಿಸಿದರೆ ನಾನು ಗೃಹ ಸಚಿವರಲ್ಲಿ ಮಾತನಾಡುತ್ತೇನೆ. ಇಲ್ಲವಾದರೆ ಕುಮಾರಸ್ವಾಮಿ ಅವರು ಮತ್ತೆ ಗೃಹಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.

ಮೈತ್ರಿಗೆ ಮೊದಲು ಜೆಡಿಎಸ್ ನ 19 MLA, ,8 MlC ಪಕ್ಷದ ಅಧ್ಯಕ್ಷ ಸಿ.ಎಮ್. ಇಬ್ರಾಹಿಂ ಜೊತೆ ಎರಡು ಸುತ್ತು ಮಾತುಕತೆ ನಡೆಸಲಾಗಿದೆ.ಈ ಮಾತುಕತೆ ಬಳಿಕ ಕುಮಾರಸ್ವಾಮಿ ಗೃಹಮಂತ್ರಿಗಳ ಭೇಟಿ ಮಾಡಿದ್ದಾರೆ
ಹಿಂದಿನ ಚುನಾವಣೆಯ ಮತಗಳಿಕೆ ಒಟ್ಟು ಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ.ಆದರೆ ಯಾವ ಕ್ಷೇತ್ರ ಅನ್ನೋ ಬಗ್ಗೆ ಇನ್ನೂ ಫೈನಲ್ ಆಗಿಲ್ಲ ಮಂಡ್ಯ ಸೇರಿದಂತೆ ಯಾವುದೇ ತೀರ್ಮಾನ ಆಗಿಲ್ಲ.ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿನೇ ಇದೆ. ಹಾಗಾಗಿ ಮುಂದೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ಈ ಬಾರಿ ಕಾಂಗ್ರೆಸ್ 28 ಗೆಲ್ಲುವ ಉತ್ಸಾಹದಲ್ಲಿದೆ. ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ ಜಾತಿ ಆಧಾರದಲ್ಲಿ ಮತ ವಿಭಜನೆಯ ಬಗ್ಗೆ ನಾನು ಈಗ ವಾದ ಮಾಡಲ್ಲ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾವಾರು ಮತ ಬಿಜೆಪಿಗೆ 30-33 ,ಕಾಂಗ್ರೆಸ್ 40, ಜೆಡಿಎಸ್ 20,22 ಸಿಕ್ಕಿದೆ. ಈ ಬಾರಿಗೆ ಯಾರಿಗೆ ಓಟ್ ಮಾಡಬೇಕು ಅನ್ನೋದನ್ನ ಮತದಾರರು ತೀರ್ಮಾನಿಸುತ್ತಾರೆ ಮಾಡ್ತಾನೆ
ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!