March 29, 2026
Sunday, March 29, 2026
spot_img

ರೇಮಂಡ್ ಗ್ರೂಪ್ ಮಾಜಿ ಅಧ್ಯಕ್ಷ, ಪದ್ಮಭೂಷಣ ಪುರಸ್ಕೃತ ವಿಜಯಪತ್ ಸಿಂಘಾನಿಯಾ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಮಂಡ್ ಗ್ರೂಪ್ ನ ಮಾಜಿ ಅಧ್ಯಕ್ಷ ಹಾಗೂ ಪದ್ಮಭೂಷಣ ಪುರಸ್ಕೃತ ವಿಜಯಪತ್ ಸಿಂಘಾನಿಯಾ ಅವರು 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ವಿಷಯವನ್ನು ಕುಟುಂಬಸ್ಥರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಅವರ ಪುತ್ರ ಹಾಗೂ ಪ್ರಸ್ತುತ ರೇಮಂಡ್ ಅಧ್ಯಕ್ಷ ಗೌತಮ್ ಸಿಂಘಾನಿಯಾ, ತಂದೆಯ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ದಾರ್ಶನಿಕ ನಾಯಕ ಹಾಗೂ ಸ್ಪೂರ್ತಿದಾಯಕ ವ್ಯಕ್ತಿತ್ವವಾಗಿದ್ದು, ಅವರ ಪರಂಪರೆ ಸದಾ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ.

1938ರ ಅಕ್ಟೋಬರ್ 4ರಂದು ಜನಿಸಿದ ವಿಜಯಪತ್ ಸಿಂಘಾನಿಯಾ, 1980ರಲ್ಲಿ ರೇಮಂಡ್ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ, ಕಂಪನಿಯನ್ನು ದೇಶದ ಪ್ರಮುಖ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ರೂಪಿಸಿದರು. ಅವರ ನಾಯಕತ್ವದಲ್ಲಿ ರೇಮಂಡ್ ಪುರುಷರ ಉಡುಪು ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿ ಬೆಳೆದಿತ್ತು.

ಇದನ್ನೂ ಓದಿ:

ವಿಮಾನಯಾನ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದ ಅವರು, ಬಿಸಿ ಗಾಳಿಯ ಬಲೂನ್‌ನಲ್ಲಿ ಅತಿ ಎತ್ತರಕ್ಕೆ ಹಾರಿದ ವಿಶ್ವ ದಾಖಲೆ ಹೊಂದಿದ್ದರು. ಉದ್ಯಮ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ 2006ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು.

ಭಾನುವಾರ ಮಧ್ಯಾಹ್ನ ಮುಂಬೈನ ಚಂದನವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಪತ್ನಿ ಆಶಾದೇವಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !