Sunday, December 10, 2023

Latest Posts

RBI ಮಾಜಿ ಗವರ್ನರ್ ಎಸ್.ವೆಂಕಟರಮಣನ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ಎಸ್.ವೆಂಕಟರಮಣನ್ ಅವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಅವರಿಗೆ 92 ವರ್ಷ ವಯಸ್ಸಾಗಿತ್ತು .

ಇಬ್ಬರು ಹೆಣ್ಣುಮಕ್ಕಳಾದ ಗಿರಿಜಾ ಮತ್ತು ಸುಧಾ ಮತ್ತು ಅವರ ಕುಟುಂಬಗಳನ್ನ ಅಗಲಿದ್ದಾರೆ.

ಎಸ್ ವೆಂಕಟರಮಣನ್ ಅವರು 18 ನೇ RBI ಗವರ್ನರ್ ಆಗಿದ್ದರು, ಅವರು ಎರಡು ವರ್ಷಗಳ ಅವಧಿಗೆ ಅಂದರೆ 1990 ರಿಂದ 1992 ರವರೆಗೆ ಸೇವೆ ಸಲ್ಲಿಸಿದರು. ಇದಕ್ಕೂ ಮೊದಲು ಅವರು 1985 ರಿಂದ 1989 ರವರೆಗೆ ಹಣಕಾಸು ಸಚಿವಾಲಯದಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!