ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಳ್ಳಾಲ ಪುರಸಭೆಯ ಮಾಜಿ ಉಪಾಧ್ಯಕ್ಷೆ ಕುಮಾರಿ ಭವಾನಿ (65) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಭವಾನಿ ಅವರು ಅವಿವಾಹಿತರಾಗಿದ್ದು ಬಿಜೆಪಿ ಪಕ್ಷದಿಂದ ಎರಡು ಬಾರಿ ಕಾಪಿಕಾಡು ವಾರ್ಡಿನಿಂದ ಸ್ಪರ್ಧಿಸಿ ಉಳ್ಳಾಲ ಪುರಸಭೆ ಮತ್ತು ಉಳ್ಳಾಲ ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಕೌನ್ಸಿಲರ್ ಆಗಿದ್ದರು.
ಭವಾನಿ ಅವರು ಉಳ್ಳಾಲ ಪುನ್ಕೆದಡಿ ಆದಿ ಕ್ಷೇತ್ರ ಬಂಡಿಕೊಟ್ಯ ಕೋರ್ದಬ್ಬು ದೈವಸ್ಥಾನದ ಸಮಿತಿಯಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು.
ಆರಂಭದಲ್ಲಿ ಉಳ್ಳಾಲ ಪುರಸಭೆಯ ಉಪಾಧ್ಯಕ್ಷರಾಗಿದ್ದ ಅವರು ಬಳಿಕ ಉಳ್ಳಾಲ ನಗರಸಭೆಯ ಸದಸ್ಯರಾಗಿ ಕಳೆದ ನವೆಂಬರ್ ತಿಂಗಳಲ್ಲಿ ಅಧಿಕಾರವಧಿ ಮುಗಿಸಿದ್ದರು.



