ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಬ್ಲ್ಯುಡಬ್ಲ್ಯುಇ ಮಾಜಿ ಚಾಂಪಿಯನ್ ಬ್ರೇ ವ್ಯಾಟ್ (36) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಎಂದು ಕಂಪನಿಯ ಸಿಸಿಒ ಪಾಲ್ ‘ಟ್ರಿಪಲ್ ಎಚ್’ ಲೆವೆಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.
ವ್ಯಾಟ್ ಅವರ ನಿಜವಾದ ಹೆಸರು ವಿಂಡ್ಹ್ಯಾಮ್ ರೊಟುಂಡಾ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಲವಾರು ತಿಂಗಳುಗಳಿಂದ ಆಟದಿಂದ ದೂರ ಉಳಿದಿದ್ದರು.
ವ್ಯಾಟ್ ಒಂದು ಬಾರಿ ಡಬ್ಲ್ಯೂ ಡಬ್ಲ್ಯೂಇ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ಯುನಿವರ್ಸಲ್ ಚಾಂಪಿಯನ್‌ಶಿಪ್ ಸೇರಿದಂತೆ ಡಬ್ಲ್ಯೂ ಡಬ್ಲ್ಯೂಇ ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಪಡೆದಿದ್ದರು.
ವ್ಯಾಟ್ ಕುಸ್ತಿ ಕುಟುಂಬಕ್ಕೆ ಸೇರಿದವರು. ಅವರ ತಂದೆ ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ. ಅವರ ಅಜ್ಜ, ಬ್ಲ್ಯಾಕ್‌ಜಾಕ್ ಮುಲ್ಲಿಗನ್ ಅವರು ವೃತ್ತಿಪರ ಕುಸ್ತಿಪಟುವಾಗಿ ತಮ್ಮ ಛಾಪು ಮೂಡಿಸಿದವರು.