ಹೊಸದಿಗಂತ ಕಲಬುರಗಿ:
ಬುಧವಾರ ಬೆಂಗಳೂರಿನ ಮಲ್ಲೇಶ್ವರಂನ ಜಗನ್ನಾಥ ಭವನದ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ಅವರ ಸಮ್ಮುಖದಲ್ಲಿ ಅಫಜಲಪುರ ಮತಕ್ಷೇತ್ರದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಬಿಜೆಪಿ ಸೇರ್ಪಡೆ ಯಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಹಿರಿಯ ಸಹೋದರ ಮಲ್ಲಿಕಯ್ಯ ಗುತ್ತೇದಾರ್ ಅವರ ಭಿನ್ನ ಮತದ ಕಾರಣ ಸಹೋದರನ ವಿರುದ್ಧವೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇತ್ತೀಚೆಗಷ್ಟೇ ನಿತಿನ್ ಗುತ್ತೇದಾರ್ ಗೆ ಬಿಜೆಪಿ ಸೇರಿಸಿಕೊಳ್ಳಬಾರದೆಂದು ಮಲ್ಲಿಕಯ್ಯ ಬೆಂಬಲಿಗರು ಪಕ್ಷದ ವರಿಷ್ಠರಿಗೆ ಆಗ್ರಹಿಸಿದರು.
ನಿತಿನ್ ಗುತ್ತೇದಾರ್ ಇದೀಗ ಪಕ್ಷಕ್ಕೆ ಸೇರಿಸಿಕೊಂಡಿರುವುದರಿಂದ ಅಫಜಲಪುರ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನ ಚುರುಕುಗೊಂಡಿದೆ.
ಈ ಸಂದರ್ಭದಲ್ಲಿ ಸಿಟಿ ರವಿ, ಆರಗ ಜ್ಞಾನೇಂದ್ರ, ಕಲಬುರಗಿ ಬಿಜೆಪಿ ಪಕ್ಷದ ನಗರ ಅಧ್ಯಕ್ಷ ಚಂದು ಪಾಟೀಲ್, ಶಿವರಾಜ್ ಪಾಟೀಲ್ ಸೇರಿದಂತೆ ಹಲವರು ಇದ್ದರು.