ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಭಾನುವಾರ (ಸೆ.03) ನಿಧನರಾಗಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ದಕ್ಷಿಣ ಆಫ್ರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನದ ಸುದ್ದಿಯನ್ನು ಸ್ಟ್ರೀಕ್ ಅವರ ಪತ್ನಿ ನಾಡಿನ್ ಅವರು ಫೇಸ್‌ಬುಕ್‌ನಲ್ಲಿ ದೃಢಪಡಿಸಿದ್ದಾರೆ.

ಜಿಂಬಾಬ್ವೆ ಕ್ರಿಕೆಟ್‌ನ ಮಾಜಿ ಆಟಗಾರ ಹೆನ್ರಿ ಒಲಂಗಾ ಸೇರಿದಂತೆ ಹಲವಾರು ಕ್ರಿಕೆಟಿಗರು, ಹೀತ್ ಸ್ಟ್ರೀಕ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಕೆಲವು ವಾರಗಳ ಹಿಂದೆ ಅವರ ಸಾವಿನ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು. ಆದರೀಗ ಇದು ನಿಜವಾಗಿದೆ.

ಹೀತ್ ಸ್ಟ್ರೀಕ್ ಜಿಂಬಾಬ್ವೆ ಪರ 65 ಟೆಸ್ಟ್, 189 ಏಕದಿನ ಪಂದ್ಯಗಳನ್ನು ಆಡಿದ್ದರು. ಈ ಎರಡು ಮಾದರಿಯಲ್ಲಿ ಅವರು 4,933 ರನ್ ಹಾಗೂ 455 ವಿಕೆಟ್ ಪಡೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!