ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಪುಟ್ಟ ಬಾಲಕನಿಂದ‌ ಸರ್ಪ್ರೈಸ್ ಗಿಫ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ-3 ಯಶಸ್ವಿಯಾದಾಗಿನಿಂದ ಇಸ್ರೋ ಮುಖ್ಯಸ್ಥ ಸೋಮನಾಥ್ ಮತ್ತು ವಿಜ್ಞಾನಿಗಳ ತಂಡವು ವಿಶ್ವದಾದ್ಯಂತ ಪ್ರಶಂಸೆ ಪಡೆಯುತ್ತಿದೆ. ಈ ನಡುವೆ ಸೋಮನಾಥ್‌ ಅವರ ನೆರೆಮನೆಯ ಪುಟ್ಟ ಬಾಲಕನಿಂದಲೂ ಪ್ರೀತಿಯ ಉಡುಗೊರೆ ಸಿಕ್ಕಿದೆ.

ಇಸ್ರೋ ಮುಖ್ಯಸ್ಥ ಸೋಮನಾಥ್ ಅವರಿಗೆ ಪುಟ್ಟ ಮಗುವಿನ ಕೈಯಿಂದ ತಯಾರಿಸಿದ ವಿಕ್ರಮ್ ಲ್ಯಾಂಡರ್ ಮಾದರಿಯನ್ನು ಉಡುಗೊರೆಯಾಗಿ ನೀಡಲಾಯಿತು. ಇದನ್ನು ಇಸ್ರೋ ವಿಜ್ಞಾನಿ ಪಿವಿ ವೆಂಕಟಕೃಷ್ಣನ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೋ ಮುಖ್ಯಸ್ಥ ಶ್ರೀ ಸೋಮನಾಥರನ್ನು ಭೇಟಿಯಾಗಲು ಬಂದ ಪುಟ್ಟ ಬಾಲಕ ಸ್ವಯಂ ನಿರ್ಮಿತ ವಿಕ್ರಮ್ ಲಾಂಡರ್ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಹುಡುಗನ ಉತ್ಸಾಹವನ್ನು ಮೆಚ್ಚಲೇಬೇಕು.. ಆ ಹುಡುಗನೂ ಮುಂದೆ ವಿಜ್ಞಾನಿಯಾಗಬೇಕು.. ಶುಭವಾಗಲಿ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸೋಮನಾಥ್ ಮತ್ತು ಇಸ್ರೋ ವಿಜ್ಞಾನಿಗಳಿಗೆ ವಿಶ್ವದಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!