ದಿನಭವಿಷ್ಯ : ಅನಾರೋಗ್ಯದಿಂದ ಮುಕ್ತಿ, ಲಾಭದಾಯಕ ದಿನ!

ಮೇಷ
ಇಂದು ಕೆಲವು ವಿಷಯಗಳಲ್ಲಿ  ಅವಸರ ಕೂಡದು. ತಾಳ್ಮೆಯಿಂದ ಕಾಯು ವುದೇ ನೀವಿಂದು ಅನುಸರಿಸಬೇಕಾದ ದಾರಿ. ದೃಢ ಚಿತ್ತರಾಗಿರಿ.

ವೃಷಭ
ಬೆಳಿಗ್ಗೆಯೆ ಕುಟುಂಬ ಸದಸ್ಯರಿಂದ ಕಿರಿಕಿರಿ ಅನುಭವಿಸುವಿರಿ. ಆದರೆ ನಂತರ ದಿನವಿಡೀ ಉತ್ಸಾಹ, ಸಂಭ್ರಮದಿಂದಲೆ ಕಳೆಯುವುದು.

ಮಿಥುನ
ಕೆಲಸಮಯದಿಂದ ಗೊಂದಲಗೊಂಡಿದ್ದ ಮನಸ್ಸು ಇಂದು ಸಮಾಧಾನ ಗೊಳ್ಳುವುದು. ಸಮಸ್ಯೆಗೆ ಸ್ಪಷ್ಟ ಪರಿಹಾರ ಕಂಡುಕೊಳ್ಳುವಿರಿ.

ಕಟಕ
ಕೌಟುಂಬಿಕ ಸಂಬಂಧ ಗಟ್ಟಿಗೊಳ್ಳಲಿದೆ. ಹೊಸ ಕಾರ್ಯಕ್ಕೆ ಉತ್ಸಾಹದಿಂದ ಧುಮುಕುವಿರಿ. ಕಚೇರಿಯಲ್ಲಿ ಎಲ್ಲ ಕಾರ್ಯ ಸಲೀಸು.

ಸಿಂಹ
ಭಾವನಾತ್ಮಕ ಸನ್ನಿವೇಶ. ವ್ಯಕ್ತಿಯೊಬ್ಬರ ಕುರಿತಾದ ಅಸಹನೆಯು ಸ್ಫೋಟಗೊಳ್ಳಬಹುದು. ಆತ್ಮೀಯರ ಸಂಗದಲ್ಲಿ ಮನಸ್ಸು ತಹಬಂದಿಗೆ ಬರುತ್ತದೆ.

ಕನ್ಯಾ
ಹೊಸತನ ತುಂಬಿದ ದಿನ. ಹೊಸ ಕನಸು, ಹೊಸ ಭರವಸೆ. ನಿಮ್ಮ ವ್ಯಕ್ತಿತ್ವ ಅರಳಿಸಲು ಬೇಕಾಗುವ ಬೆಳವಣಿಗೆ ಸಂಭವಿಸುವುದು. ಆರ್ಥಿಕವಾಗಿ ಸದೃಢ.

ತುಲಾ
ದಿನವಿಡೀ ಮನಸ್ಸಿಗೆ ಕಿರಿಕಿರಿ. ನಿಶ್ಚಿತ ಕಾರಣ ವಿಲ್ಲದೇ ಪ್ರತಿಯೊಬ್ಬರ ಮಾತಿಗೂ ಸಿಡುಕು ತ್ತೀರಿ. ಮನಸ್ಸಿಗೆ  ಸಮಾಧಾನ ತಂದು ಕೊಳ್ಳಿ.

ವೃಶ್ಚಿಕ
ನಿಮ ಕಾರ್ಯಗಳು ಇಂದು ನಿಮಗೆ ಜನಪ್ರಿಯತೆ ತಂದುಕೊಡುವವು. ಇತರರಿಗೆ ನೆರವು ನೀಡುವಿರಿ. ಖರ್ಚು ಅಧಿಕವಾಗಬಹುದು.

ಧನು
ಮುಂಜಾನೆಯಿಡೀ ಮನಸ್ಸು ಅಸ್ತವ್ಯಸ್ತ. ಸಮಸ್ಯೆಗಳು ಕಾಡುವುವು. ಸಂಜೆ ವೇಳೆಗೆ ಸಮಸ್ಯೆ ಪರಿಹಾರ ಕಾಣುತ್ತವೆ. ಮನಸ್ಸು ನಿರಾಳ.

ಮಕರ
ಇಂದು ಮೊದಲಿಗೆ ಸೋಲು ಹಾಗೂ ಬಳಿಕ ಗೆಲುವನ್ನು ಅನುಭವಿಸುತ್ತೀರಿ. ಮನ ಕವಿದಿದ್ದ ಆತಂಕ ದೂರವಾಗುವುದು. ನಿಶ್ಚಿಂತರಾಗಿರಿ.

ಕುಂಭ
ಇಂದಿನ ದಿನ ನಿಮಗೆ ವಿಭಿನ್ನವೆನಿಸಲಿದೆ. ಏಕತಾನತೆಯ ಕೆಲಸದ ಬದಲಾಗಿ ಹೊಸ ಕಾರ್ಯ, ಹೊಸ ಹೊಣೆ ಹೆಗಲೇರಲಿದೆ. ಉತ್ಸಾಹಕ್ಕೆ ಭಂಗವಿಲ್ಲ.

ಮೀನ
ಅನವಶ್ಯವಾಗಿ ಎಲ್ಲರೊಂದಿಗೆ ಕಠಿಣವಾಗಿ ವರ್ತಿಸದಿರಿ. ಮೃಧು ದೋರಣೆಯು ಸಮಸ್ಯೆ ಪರಿಹಾರಕ್ಕೆ ನೆರವು ನೀಡುವುದು. ಸಹನೆ ಇರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!