ಹೊಸದಿಗಂತ ವರದಿ ಬಾಗಲಕೋಟೆ:
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸ್ಥಾಪನಾ ದಿನ ಇವೆರಡೂ ಐತಿಹಾಸಿಕ ದಿನಗಳ ಸಮ್ಮಿಲನ, “ಪ್ರಜಾಪ್ರಭುತ್ವದ” ತತ್ವಗಳನ್ನು ಉತ್ತೇಜಿಸುವ ಮತ್ತು ಅದರ ಆಶಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಸೆಪ್ಟೆಂಬರ್ 15 ರ ಈ ದಿನವನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ಜಾಗತಿಕವಾಗಿ ನಿಧ೯ರಿಸಲಾಯಿತು ಎಂದು ಮಹಿಳಾ ಘಟಕದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಹೇಳಿದರು.
ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸುವ ಜೊತೆಯಲ್ಲಿ ಸಂವಿಧಾನ ಪೀಠಿಕೆ ಓದಿ ತದನಂತರ ಧ್ವಜಾರೋಹಣ, “ಮಹಿಳಾ ಕಾಂಗ್ರೆಸ್ ಸ್ಥಾಪನಾ ದಿನಾಚರಣೆ” ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ರೇಣುಕಾ ನ್ಯಾಮಗೌಡರ, ಮಂಜುಳಾ
ಭೂಸಾರೆ, ಅನುರಾಧಾ ದೊಡಮನಿ, ಸಾವಿತ್ರಿ ಗಾಜಿ,ಮೇನಕಾ ರಾಠೋಡ, ಸಾವಿತ್ರಿ ಗೌಡರ, ಮಮತಾಜ್ ಸುತಾರ, ಶೈಲಾ ನಾಯಕ,ಜೈಗುಣ, ಸೌಂಶಾದ, ನಾಗಮೆಲ್ಲಶ್ವರಿ, ರೇಣುಕಾ ನಾರಾಯಣಕರ್, ಪಾರು ಲಮಾಣಿ, ನೀಲಮ್ಮ ಕಾಲಗ್ಗಘರ್, ಚೌಧಾರಿ ಮತ್ತು ಮಂಜುಳಾ ಸಿಕ್ಕೇರಿ ಹಾಗೂ ಮಹಿಳಾ ಕಾರ್ಯಕರ್ತರು ಹಾಜರಿದ್ದರು.