ಹೊಸದಿಗಂತ ವರದಿ ಕಲಬುರಗಿ:
ತೊಗರಿ ಬೆಳೆಯಲ್ಲಿ ಅಕ್ರಮವಾಗಿ ಬೆಳೆಸಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂಗಾಪುರದ ಹೊಲವೊಂದರಲ್ಲಿ ನಡೆದಿದೆ.
ತೊಗರಿ ಬೆಳೆಗಳ ಜೊತೆಗೆ 48 ಸಾವಿರ ರೂಪಾಯಿ ಮೌಲ್ಯದ ಒಟ್ಟು ಏಳು ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು,ಜಮೀನಿನ ಮಾಲೀಕರಾದ ವಿನೋದ್ ಪಾಂಡು ಅವರನ್ನು ಸಹ ಬಂಧಿಸಲಾಗಿದೆ.
ಡಿವೈಎಸ್ಪಿ ವಿಜಯಕುಮಾರ್ ರಾಂಪುರೆ ಹಾಗೂ ಅಬಕಾರಿ ಸಿಬ್ಬಂದಿ ವರ್ಗದವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.