ನಾಲ್ಕೇ ದಿನಗಳಲ್ಲಿ 400 ಕೋಟಿ ಕಲೆಕ್ಷನ್​: ದಾಖಲೆ ನಿರ್ಮಿಸಿದ ಪಠಾಣ್​​ ಸಿನಿಮಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನಾದ್ಯಂತ ತೆರೆ ಕಂಡಿರುವ ಪಠಾಣ್​ ಸಿನಿಮಾ ನಾಲ್ಕೇ ದಿನಗಳಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕರಾದ ರಮೇಶ್​ ಬಾಲಾ ಮತ್ತು ತರಣ್​ ಆದರ್ಶ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಪಠಾಣ್​ ಚಿತ್ರದ ಮೂಲಕ ಬಾಲಿವುಡ್​ ಮತ್ತೆ ಯಶಸ್ಸಿನ ಮಾರ್ಗಕ್ಕೆ ಬಂದಿದೆ. ಬಾಯ್ಕಾಟ್​ನಿಂದ ತತ್ತರಿಸಿದ್ದ ಹಿಂದಿ ಚಿತ್ರರಂಗಕ್ಕೆ ಕಿಂಗ್​ ಖಾನ್​ ಸಿನಿಮಾ ಬೂಸ್ಟರ್​ ಡೋಸ್​ನಂತೆ ಕೆಲಸ ಮಾಟಿದೆ. ಸಿನಿಮಾ ಜನವರಿ 25ರಂದು ತೆರೆಕಂಡು ಭಾರತ ಸೇರಿದಂತೆ ಜಗತ್ತಿನ 100 ದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರವು ತೆರೆ ಕಂಡು ನಾಲ್ಕೇ ದಿನಗಳಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಮತ್ತೋರ್ವ ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್​ ಆದರ್ಶ್ ಟ್ವೀಟ್ ಮಾಡಿದ್ದು, ಚಿತ್ರ ಜಗತ್ತಿನಾದ್ಯಂತ ಒಟ್ಟು 429 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!