ಮಧ್ಯಪ್ರದೇಶದಲ್ಲಿ ನಾಲ್ಕು ಕಾಲಿನ ಹೆಣ್ಣು ಮಗು ಜನನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದಲ್ಲಿ ನಾಲ್ಕು ಕಾಲುಗಳಿರುವ ಹೆಣ್ಣು ಮಗು ಜನಿಸಿದೆ. ಗ್ವಾಲಿಯರ್‌ನ ಕಮಲರಾಜ ಆಸ್ಪತ್ರೆಯಲ್ಲಿ ಆರತಿ ಕುಶ್ವಹ ಅವರು ನಾಲ್ಕು ಕಾಲಿನ ಮಗುವಿಗೆ ಜನ್ಮ ನೀಡಿದ್ದಾರೆ. ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 2.3 ಕೆ.ಜಿ ಇರುವ ಮಗುವಿನ ಪರೀಕ್ಷೆ ನಡೆದಿದ್ದು, ದೈಹಿಕ ವಿಕಲತೆ ಹೊಂದಿದೆ. ಕೆಲವರಲ್ಲಿ ಈ ಸಮಸ್ಯೆ ಇರುತ್ತದೆ. ಇದರಿಂದ ಪ್ರಾಣಕ್ಕೆ ತೊಂದರೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಭ್ರೂಣವು ಎರಡು ಭಾಗವಾಗಿ ವಿಭಜನೆಯಾದಾಗ ದೇಹವು ಎರಡು ಸ್ಥಳಗಳಲ್ಲಿ ಬೆಳೆಯುತ್ತದೆ. ಸೊಂಟದ ಕೆಳಗಿನ ಭಾಗದಲ್ಲಿ ಹೆಚ್ಚುವರಿ ಕಾಲುಗಳಿವೆ. ಇವು ನಿಷ್ಕ್ರಿಯಾವಗಿದೆ. ಮಗು ಸಂಪೂರ್ಣ ಆರೋಗ್ಯಕರವಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಕಾಲುಗಳನ್ನು ತೆಗೆದರೆ ಮಗು ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!