ಹೊಸದಿಗಂತ ವರದಿ,ರಾಯಚೂರು
ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು. ಇವರು ಬಲವಾದ ವಿಷಕಾರಿ ಆಹಾರ ಪದಾರ್ಥ ಸೇವನೆಯಿಂದ ಮೃತಪಟ್ಟಿರುವುದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ನಿತಿಶ್.ಕೆ ತಿಳಿಸಿದ್ದಾರೆ.
ನಗರದ ರಿಮ್ಸ್ಗೆ ಆಸ್ಪತ್ರೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ದಾಖಲಾಗಿರುವ ವ್ಯಕ್ತಿಗಳ ಆರೋಗ್ಯವನ್ನು ವಿಚಾರಿಸಿದರು. ನಂತರ ಮಾತನಾಡಿ. ಈ ಘಟನೆಯಲ್ಲಿ ಭೀಮಣ್ಣ(೬೦), ಈರಮ್ಮ (೫೪), ಮಲ್ಲೇಶ (೧೯) ಹಾಗೂ ಪಾರ್ವತಿ (೧೭) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಚಿಕಿತ್ಸೆ ನೀಡಿದರೂ ಬದುಕುಳಿದಿಲ್ಲ. ಇವರನ್ನು ಆಸ್ಪತ್ರೆಗೆ ತರುವಾಗ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಪ್ರಸ್ತುತ ಮಲ್ಲಮ್ಮ ಕೋಮಾದಲ್ಲಿದ್ದಾರೆ, ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಈಗಾಗಲೆ ಆಹಾರ ಪದಾರ್ಥಗಳನ್ನು ಸ್ಯಾಂಪಲ್ ಪಡೆದು ಟೆಸ್ಟ್ಗೆ ಕಳಿಸಲಾಗಿದೆ. ಇವರು ಚಪಾತಿ, ಮಟನ್ ಮತ್ತು ತರಕಾರಿ ಊಟ ಮಾಡಿದ್ದರು. ವಿಷ ಆಹಾರ ಸೇವಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಿಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ .