ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಮೃಗಾಲಯ ಪ್ರಾಧಿಕಾರವು ನಾಲ್ಕು ಹುಲಿ ಮರಿಗಳನ್ನು ಬಂಗಾಳ ಸಫಾರಿಗೆ ಬಿಡುಗಡೆ ಮಾಡಿದೆ. ಸಿಲಿಗುರಿ ನಗರದ ಹುಲಿ ಸಫಾರಿಯಲ್ಲಿ ಆರು ತಿಂಗಳ ವಯಸ್ಸಿನ ನಾಲ್ಕು ಹುಲಿ ಮರಿಗಳನ್ನು ಆವರಣಕ್ಕೆ ಬಿಡಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆರು ವರ್ಷಗಳಿಂದ ಸಫಾರಿಯಲ್ಲಿದ್ದ 6ವರ್ಷದ ಶಿಲಾ ಎಂಬ ಹುಲಿ ಮಾರ್ಚ್ 22 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಾಲ್ ಸಫಾರಿಯು ಶಿಲಾ, ರಿಕಾ, ತೇಜಲ್, ತಾರಾ ಮತ್ತು ಬಿವಾನ್ ಎಂಬ ಐದು ಹೆಣ್ಣು ಹುಲಿಗಳ ಜೊತೆಗೆ ಕೇವಲ ಒಂದು ಗಂಡು ಹುಲಿಯನ್ನು ಹೊಂದಿದೆ. ಬಂಗಾಳದ ಅರಣ್ಯ ಸಚಿವೆ ಜ್ಯೋತಿಪ್ರಿಯಾ ಮಲ್ಲಿಕ್ ಅವರು ನಾಲ್ಕು ಹುಲಿ ಮರಿಗಳನ್ನು ಬೆಂಗಾಲ್ ಸಫಾರಿಗೆ ಬಿಡುಗಡೆ ಮಾಡಿದರು ಎಂದು ಮೃಗಾಲಯದ ನಿರ್ದೇಶಕ ದೇವ ಸಂಗಮ ಶೆರ್ಪಾ ತಿಳಿಸಿದ್ದಾರೆ.
ಹುಲಿ ಮರಿಗಳ ವರ್ತನೆಯನ್ನು ಗಮನಿಸಿದ ನಂತರವೇ ಸಫಾರಿಗೆ ಬಿಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹುಲಿ ಮರಿಗಳು ಸಿಲಿಗುರಿ ಮೃಗಾಲಯದ ವಿಶೇಷ ಆಕರ್ಷಣೆ. ಸಿಲಿಗುರಿಯಲ್ಲಿ ಸಿಂಹ ಮತ್ತು ಕರಡಿ ಸಫಾರಿ ಆಯೋಜಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮೋದನೆ ನೀಡಿದೆ ಎಂದು ಮೃಗಾಲಯದ ನಿರ್ದೇಶಕರು ವಿವರಿಸಿದರು.
Four tiger cubs released in Bengal Safari
Read @ANI Story | https://t.co/mnFBPaceSF#BengalSafari #Tiger #WestBengal pic.twitter.com/YsX7XTeTTl
— ANI Digital (@ani_digital) October 11, 2022