Tuesday, March 28, 2023

Latest Posts

ಬೀದಿ ನಾಯಿ ದಾಳಿಗೆ ನಾಲ್ಕು ವರ್ಷದ ಕಂದಮ್ಮ ಬಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ಬೀದಿ ನಾಯಿ ಹಾವಳಿಗೆ ನಾಲ್ಕು ವರ್ಷದ ಕಂದಮ್ಮ ಬಲಿಯಾಗಿದೆ.

ತೆಲಂಗಾಣದ ವಸತಿ ಪ್ರದೇಶವೊಂದರಲ್ಲಿ ಮಗು ಆಟವಾಡುತ್ತಿತ್ತು. ಏಕಾಏಕಿ ಬೀದಿ ನಾಯಿಗಳು ಬಾಲಕನ ಮೇಲೆ ಅಟ್ಯಾಕ್ ಮಾಡಿವೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೂರು ನಾಯಿಗಳು ಮಗುವಿನ ಸುತ್ತ ಹೋಗಿದ್ದು, ಮಗು ಕೆಳಗೆ ಬಿದ್ದಿದೆ. ಬಳಿಕ ನಾಯಿಗಳು ಮಗುವಿನ ಮೇಲೆ ಅಟ್ಯಾಕ್ ಮಾಡಿವೆ, ಆದರೆ ಮಗು ಏಳಲು ಸಾಧ್ಯವಾಗಿಲ್ಲ. ಮಗುವಿನ ಸದ್ದು ಕೇಳಿ ತಂದೆ ಓಡಿಬಂದಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊರಳಗೆ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!