ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಯುವತಿಯೊಬ್ಬಳನ್ನು ಮೋಸದಿಂದ ಅಪಹರಿಸಿ ಅತ್ಯಾಚಾರ ಮಾಡಿದ್ದಲ್ಲದೇ ಆಕೆಯನ್ನು 8 ತಿಂಗಳ ಕಾಲ ಬಂಧನದಲ್ಲಿರಿಸಿ ಪದೇ ಪದೇ ಹಿಂಸಿಸಿ, ಒತ್ತಾಯದಿಂದ ಗೋಮಾಂಸ ತಿನ್ನಿಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ಘಟನೆ ಶುರುವಾಗಿದ್ದು 2021ರಲ್ಲಿ. ನಿತ್ಯವೂ ಮೆಟ್ರೋ ಮೂಲಕ ದೆಹಲಿಯಿಂದ ಗುರುಗ್ರಾಮ್ ಗೆ ಕೆಲಸಕ್ಕೆ ತೆರಳುತ್ತಿದ್ದ ಹಿಂದು ಯುವತಿಯೊಬ್ಬಳ ಮೇಲೆ ಅದೇ ಮೆಟ್ರೋ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನೋರ್ವ ಆಕೆಯ ದಿನಚರಿಯನ್ನು ಗಮನಿಸುತ್ತಿದ್ದ. ಆತನ ಹೆಸರು ಸೈಫ್ ಅನ್ಸಾರಿ. ಹೀಗೆ ಒಂದು ದಿನ ಅವನ ಗೆಳೆಯ ಕೆಲಸ ಕಳೆದುಕೊಂಡಿದ್ದಾನೆ ನಿಮ್ಮ ಕಂಪನಿಯಲ್ಲಿ ಕೆಲಸ ಕೊಡಿಸುತ್ತೀರಾ ಎಂದು ಮಾತನಾಡಿಸಿದವ ಆಕೆಯ ನಂಬರ್ ಪಡೆದುಕೊಂಡ. ನಿತ್ಯವೂ ಆಕೆಯೊಂದಿಗೆ ಚಾಟಿಂಗ್ ಶುರುವಾಯಿತು. ಬಣ್ಣದ ಮಾತುಗಳ ಮೂಲಕ ಆಕೆಯ ಸ್ನೇಹಗಳಿಸಿದ ಸೈಫ್ ಅನ್ಸಾರಿ ಒಂದು ದಿನ ಆಕೆಯೊಂದಿಗೆ ವಿವಾಹ ಪ್ರಸ್ತಾಪ ಮುಂದಿಟ್ಟ. ಆದರ ಆಕೆ ತಾನು ಹಿಂದೂ ಆಗಿರುವುದರಿಂದ ಮದುವೆ ಸಾಧ್ಯವಿಲ್ಲವೆಂದು ಸೌಮ್ಯವಾಗಿ ತಿರಸ್ಕರಿಸಿದಳು.
ಕೊನೆಗೆ ಹೇಗಾದರೂ ಮಾಡಿ ಆಕೆಯನ್ನು ಪಟಾಯಿಸಲು ಅನ್ಸಾರಿ ತಾನು ಬಿಹಾರಕ್ಕೆ ವಾಪಸ್ಸಾಗುತ್ತಿದ್ದೇನೆಂದು ಗೋಗರೆದು ಅತ್ತು ಆಕೆಯನ್ನು ಕರೆಸಿದ, ಕೊನೆಯ ಭೇಟಿಯಾದ್ದರಿಂದ ಊಟಕ್ಕೆ ಬಿರಿಯಾನಿ ತಿನ್ನಿಸಿದ.ಆದರೆ ಅದರಲ್ಲಿ ಮತ್ತು ಬರಿಸುವ ಔಷಧಿಗಳಿವೆ ಎಂದು ಗೊತ್ತಿಲ್ಲದ ಪಾಪದ ಯುವತಿ ಆತನ ಮೋಸದ ಬಲಿಪಶುವಾದಳು. ಅಲ್ಲಿಂದ ನಡೆದುದ್ದೆಲ್ಲ ಅಮಾನುಷ ವಿಕೃತಿಯ ಮೆರೆತ.
ಅಮಲಿನಲ್ಲಿದ್ದ ಆಕೆಯನ್ನು ದೆಹಲಿಯ ಪಹರ್‌ಗಂಜ್ ಪ್ರದೇಶದ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ, ಅಲ್ಲದೇ ಈ ವಿಕೃತಿಯನ್ನು ವಿಡಿಯೋ ರೆಕಾರ್ಡ್ ಮಾಡಿದ. ಸಿಗರೇಟನ್ನು ಹಚ್ಚಿ ಅವಳ ದೇಹದ ಭಾಗಗಳನ್ನು ಸುಟ್ಟ. ಅಲ್ಲಿಂದ ಆಕೆಯನ್ನು ಬಿಹಾರಕ್ಕೆ ಕರೆದೊಯ್ದ. ಬಿಹಾರದಲ್ಲೂ ಕೂಡ ಅನ್ಸಾರಿಯ ತಂದೆ ಸೇರಿದಂತೆ ಆತನ ಕೆಲ ಸಂಬಂಧಿಕರು ಆಕೆಯ ಮೇಲೆ ಅತ್ಯಾಚಾರವೆಸಗಿದರು.ಅಲ್ಲಿ ಕೆಲದಿನ ಆತನನ್ನು ಮದುವೆಯಾಗುವಂತೆ ಪೀಡಿಸಿ ಮತ್ತೆ ಗುರುಗ್ರಾಮಕ್ಕೆ ವಾಪಸ್ ಕರೆದುಕೊಂಡು ಬಂದು ತನ್ನ ತಂದೆಯ ಚಿಕ್ಕಮ್ಮನ ಮನೆಯಲ್ಲಿಟ್ಟು ಬೀಗ ಹಾಕಿದ. ಅಲ್ಲೂ ಕೂಡ ಮತ್ತೆ ಅತ್ಯಾಚಾರಗಳು ನಡೆದವು, ಅವನ ತಂದೆಯ ಚಿಕ್ಕಮ್ಮ ಅವಳನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಬೆದರಿಕೆ ಹಾಕಿದರು ಮತ್ತು ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿದರು.
ಅಂತೂ ಕೊನೆಗೆ ಮೇ 13 ರಂದು ಸಂತ್ರಸ್ತ ಯುವತಿ ಆ ನರಕದಿಂದ ಹೇಗೋ ತಪ್ಪಿಸಿಕೊಂಡಳು, ಗುರುಗ್ರಾಮ್ ಪೋಲೀಸರನ್ನು ಸಂಪರ್ಕಸಿ ತನಗಾದ ಭೀಕರ ಅನ್ಯಾಯವನ್ನು ವಿವರಿಸಿದಳು. ಆಕೆಯ ದೂರಿನ ಆಧಾರದ ಮೇಲೆ ಪೋಲೀಸರು ಸೈಫ್ ಅನ್ಸಾರಿ ಮತ್ತವನ ಸಂಬಂಧಿಕರನ್ನು ಬಂಧಿಸಿದರು. ಆರೋಪಿ ಸೈಫ್ ಅನ್ಸಾರಿ, ಆತನ ತಂದೆ ಶಾಹಿದ್ ಅನ್ಸಾರಿ, ತಂದೆಯ ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಸಂತ್ರಸ್ತೆಗೆ ಕಿರುಕುಳ ನೀಡಿದ ಇತರ ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಿಸಿದರು.
ಅಂತೂ ಆಕೆ ಮೋಸದ ಜಾಲದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಪೋಲೀಸರು ಆತನ ಮೇಲೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.