ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿ ಜೀವಗಳಿಗೆ ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ , ನಟಿ ನುಸ್ರತ್ ಜಹಾನ್ (Nusrat Jahan) ಇಂದು ಇಡಿ (ED) ಅಧಿಕಾರಿಗಳ ಮುಂದೆ ಹಾಜರಾದರು.
.ನುಸ್ರತ್ ಜಹಾನ್, ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.
ಇಡಿಯಿಂದ ನೋಟಿಸ್ ಪಡೆದುಕೊಂಡಿದ್ದ ನುಸ್ರತ್ ಸಾಲ್ಟೆಲೇಕ್ ನಲ್ಲಿರುವ ಸಿಜಿಓ ಆಫೀಸಿಗೆ ಇಂದು ಹಾಜರಾಗಿದ್ದರು. ಇಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ಕಂಪನಿಯೊಂದರ ನಿರ್ದೇಶಕಿಯಾಗಿರುವ ನುಸ್ರತ್, ಆ ಕಂಪನಿಯು ಫ್ಲ್ಯಾಟ್ ನೀಡಿಲ್ಲ ಎಂದು ಹೇಳಲಾಗುತ್ತಿದೆ.