ಸೇನಾ ವೈದ್ಯ, ಪ್ರಧಾನಿ ಕಚೇರಿ ಅಧಿಕಾರಿ, ಎನ್‌ಐಎ ಹೆಸರಲ್ಲಿ ವಂಚನೆ: ಬುಖಾರಿಗೆ ಇನ್ನು ಜೈಲೂಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ, ಸೇನಾ ವೈದ್ಯ, ನರದ ಶಸ್ತ್ರಚಿಕಿತ್ಸಕ, ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ನಿಕಟ ಸಹವರ್ತಿ ಎಂದು ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಒರಿಸ್ಸಾ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸೈಯದ್ ಇಶಾನ್ ಬುಖಾರಿ ಅಲಿಯಾಸ್ ಇಶಾನ್ ಬುಖಾರಿ ಅಲಿಯಾಸ್ ಡಾ. ಇಶಾನ್ ಬುಖಾರಿ (37) ಬಂಧಿತ ಆರೋಪಿ.
ಈ ಖತರ್ನಾಖ್ ಆರೋಪಿ, ಹಲವಾರು ನಕಲಿ ಗುರುತುಗಳನ್ನು ಹೊಂದಿದ್ದ. ಜೊತೆಗೆ ಪಾಕಿಸ್ತಾನ, ಕೇರಳದ ಕೆಲವು ಮಂದಿಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಎಸ್‌ಟಿಎಫ್ ಇನ್ಸ್‌ಪೆಕ್ಟರ್ ಜನರಲ್ ಜೆ.ಎನ್.ಪಂಕಜ್ ಹೇಳಿದ್ದಾರೆ.
ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ನಕಲಿ ವೈದ್ಯಕೀಯ ಪದವಿ ಪ್ರಮಾಣಪತ್ರ ಹೊಂದಿರುವುದು, ಕೆನಡಿಯನ್ ಹೆಲ್ತ್ ಸರ್ವಿಸಸ್ ಇನ್‌ಸ್ಟಿಟ್ಯೂಟ್, ತಮಿಳಿನಲ್ಲಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‌ನಿಂದ ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ಮಾಡಿರುವುದು, ಅಂತಾರಾಷ್ಟ್ರೀಯ ಪದವಿಗಳು, ಅಫಿಡವಿಟ್‌ಗಳು, ಬಾಂಡ್‌ಗಳು, ಎಟಿಎಂ ಕಾರ್ಡ್‌ಗಳು, ಖಾಲಿ ಚೆಕ್‌ಗಳು, ಆಧಾರ್ ಕಾರ್ಡ್‌ಗಳು ಮತ್ತು ವಿಸಿಟಿಂಗ್ ಕಾರ್ಡ್‌ಗಳನ್ನು ಇಟ್ಟುಕೊಂಡು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿರುವುದು ತನಿಖೆಯ ವೇಳೆ ಖಚಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!