1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್’: ‘ಸೌರಗೃಹ ಯೋಜನೆ’ಗೆ ಕೇಂದ್ರ ಸರ್ಕಾರ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕೋಟಿ ಕುಟುಂಬಗಳಿಗೆ ಮೇಲ್ಛಾವಣಿ ಸೌರ ಯೋಜನೆಗೆ ಕೇಂದ್ರವು ಗುರುವಾರ ಅನುಮೋದನೆ ನೀಡಿದೆ.

ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಈ ಯೋಜನೆಯಡಿ ಒಂದು ಕೋಟಿ ಕುಟುಂಬಗಳಿಗೆ 75,000 ಕೋಟಿ ರೂ.ಗಳ 300 ಯುನಿಟ್ ಉಚಿತ ವಿದ್ಯುತ್ ಸಿಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಪ್ರತಿ ಕುಟುಂಬವು 1 ಕಿಲೋವ್ಯಾಟ್ ವ್ಯವಸ್ಥೆಗೆ 30,000 ರೂ ಮತ್ತು 2 ಕಿಲೋವ್ಯಾಟ್ ವ್ಯವಸ್ಥೆಗೆ 60,000 ರೂ ಸಬ್ಸಿಡಿ ಪಡೆಯಬಹುದು.

ಸುಸ್ಥಿರ ಅಭಿವೃದ್ಧಿ ಮತ್ತು ಜನರ ಯೋಗಕ್ಷೇಮಕ್ಕಾಗಿ, ನಾವು ಪಿಎಂ ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. 75,000 ಕೋಟಿ ರೂ.ಗಳ ಹೂಡಿಕೆಯ ಈ ಯೋಜನೆಯು ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗಿಸುವ ಗುರಿಯನ್ನು ಹೊಂದಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!