ವೋಟ್‌ ಹಾಕಿದ್ರೆ ಧಾರವಾಡದಲ್ಲಿ ಫ್ರೀ ಹೆಲ್ತ್‌ ಚೆಕಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮತದಾನ ಮಾಡಿ ಬಂದವರಿಗೆ ದೋಸೆ ಕೊಟ್ಟಿದ್ದು, ಜ್ಯೂಸ್‌ ಕೊಟ್ಟಿದ್ದು.. ಇಂಥ ಸುದ್ದಿಗಳನ್ನು ಓದಿರ್ತೀರಿ ಆದರೆ ಧಾರವಾಡದಲ್ಲಿ ಮತ ಹಾಕಿದವರಿಗೆ ಉಚಿತವಾಗಿ ಹೆಲ್ತ್‌ ಚೆಕಪ್‌ ಮಾಡಿಸಲಾಗುತ್ತಿದೆ.

ಮತದಾನ ಮಾಡಿದವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಇಸಿಜಿ ತಪಾಸಣೆ ಮಾಡಲಾಗುತ್ತಿದೆ. ಧಾರವಾಡದ ಹರೀಶ ಮೆಡಿಕಲ್​ ಲ್ಯಾಬ್‌, ಮಾಳಮಡ್ಡಿ ಮತ್ತು ಕಾಮನಕಟ್ಟಿರುವ ಲ್ಯಾಬ್​ನಲ್ಲಿ ಕೈ ಬೆರಳಿನ ಶಾಹಿ ತೋರಿಸಿದವರಿಗೆ ಉಚಿತ ತಪಾಸಣೆ ಮಾಡಲಾಗುತ್ತಿದ್ದು, ಬೆಳಗ್ಗೆಯಿಂದ ನೂರಕ್ಕೂ ಹೆಚ್ಚು ಮತದಾರರಿಗೆ ತಪಾಸಣೆ ಮಾಡಲಾಗಿದೆ.

ಇನ್ನು ಇದು ಸಂಜೆಯವರೆಗೂ ಉಚಿತ ತಪಾಸಣೆ ನಡೆಯಲಿದೆ. ಒಟ್ಟಾರೆ 500ರೂಪಾಯಿಯಷ್ಟು ಖರ್ಚಾಗುವ ಚೆಕಪ್‌ ಫ್ರೀಯಾಗಿ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!