ಹೊಸದಿಗಂತ ಡಿಜಿಟಲ್ ಡೆಸ್ಕ್ :
ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗುತ್ತಿದೆ. ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುತ್ತಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯ ವೀಕ್ಷಣೆಗೆ ಬರುವ ಮೊದಲ 500 ಮಹಿಳಾ ಅಭಿಮಾನಿಗಳಿಗೆ ಫ್ರೀ ಟಿಕೆಟ್ ನೀಡುವುದಾಗಿ ಬಿಸಿಸಿಐ ಹೇಳಿದ್ದು, ಮಹಿಳೆಯರು ಫುಲ್ ಖುಷ್ ಆಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು, ಖ್ಯಾತ ಬಾಲಿವುಡ್ ತಾರೆಯರು ಪ್ರದರ್ಶನ ನೀಡಲಿದ್ದಾರೆ. ಈ ಮೂಲಕ ಡಬ್ಲ್ಯುಪಿಎಲ್ಗೆ ಭರ್ಜರಿ ಆರಂಭ ನೀಡುವ ಇರಾದೆಯಲ್ಲಿರುವ ಬಿಸಿಸಿಐ, ಉದ್ಘಾಟನಾ ಪಂದ್ಯವನ್ನು ನೋಡಲು ಬರುವ ಮಹಿಳೆಯರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದೆ.