ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಟ್ ಆದ ಎಲ್ಲ ಕಂಟೆಸ್ಟೆಂಟ್‌ಗಳು ವಾಪಾಸಾಗಿದ್ದಾರೆ.
ಮನೆಯಲ್ಲಿ ಯಾರು ಗೆಲ್ಬೇಕು ಎನ್ನುವ ಪ್ರಶ್ನೆಯನ್ನು ಬಿಗ್‌ಬಾಸ್ ಹಳೆಯ ಕಂಟೆಸ್ಟೆಂಟ್‌ಗಳಿಗೆ ಕೇಳಿದೆ. ಅದಕ್ಕೆ ಸ್ನೇಹಿತ್ ವಿನಯ್ ಎನ್ನುವ ಉತ್ತರ ನೀಡಿದ್ದಾರೆ.
ಯಾವಾಗ್ಲೂ ನಮ್ರತಾರನ್ನೇ ಮೊದಲು ಚೂಸ್ ಮಾಡ್ತಿದ್ದ ಸ್ನೇಹಿತ್ ವಿನಯ್‌ನ್ನು ಆಯ್ಕೆ ಮಾಡಿದ್ದು ನಮ್ರತಾಗೆ ಇಷ್ಟವಾಗಿಲ್ಲ. ಇಷ್ಟು ದಿನ ನನ್ನ ಜೊತೆ ಇದ್ದ ಸ್ನೇಹ ಫೇಕಾ? ಎನ್ನುವ ಅನುಮಾನ ನಮ್ರತಾಗೆ ಕಾಡಿದೆ.
ಇನ್ನು ನಾನ್ಯಾಕೆ ವಿನ್ನರ್ ಆಗಬಾರದು ಎಂದು ನಮ್ರತಾ ಸ್ನೇಹಿತ್‌ರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಸ್ನೇಹಿತ್ ನೀವು ಎಲ್ಲೋ ಕಳೆದುಹೋಗಿದ್ದೀರಿ, ನಿಮ್ಮ ಬಲದ ಮೇಲೆ ನೀವು ಗೆದ್ದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಎಷ್ಟು ಜನರನ್ನು ಗೆಲ್ಲಿಸ್ತೀರಿ ಬಿಡಿ ಎಂದು ನಮ್ರತಾ ಸಿಟ್ಟಾಗಿದ್ದಾರೆ. ಇದಕ್ಕೆ ಸ್ನೇಹಿತ್ ಬಳಿ ಯಾವುದೇ ಉತ್ತರ ಇರಲಿಲ್ಲ!