ಬೆಳ್ತಂಗಡಿಯಿಂದ ನೆಲಮಂಗಲದವರೆಗೂ ಚಂದನವನದ ಲೀಲಾವತಿಯ ಹೆಜ್ಜೆಗುರುತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ.
ಅವರ ಅಗಲಿಕೆಯ (Leelavathi Death) ಸುದ್ದಿ ತಿಳಿದು ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅವರ ಕೊಡುಗೆ ಅಪಾರ. ‘ಸಂತ ತುಕಾರಾಂ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’, ‘ವೀರ ಕೇಸರಿ’ ಮುಂತಾದ ಸಿನಿಮಾ ಸಹಿತ 50 ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದರು.ರಾಜ್​ಕುಮಾರ್​, ವಿಷ್ಣುವರ್ಧನ್​ ಮುಂತಾದ ನಟರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿದ್ದರು
ವರನಟ ಡಾ. ರಾಜ್​ಕುಮಾರ್​ ಜೊತೆ 36 ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ರಾಜ್​ಕುಮಾರ್​ (Dr. Rajkumar) ಮತ್ತು ಲೀಲಾವತಿ ಅವರದ್ದು ಚಂದನವನದಲ್ಲಿ ಸೂಪರ್​ ಹಿಟ್​ ಜೋಡಿ ಎಂದು ಎಣಿಸಿಕೊಳ್ಳುತ್ತಿದ್ದರು.

ನಟಿ ಲೀಲಾವತಿ ಜೀವನ
ಲೀಲಾವತಿ ಅವರು ಜನಿಸಿದ್ದು 1937ರ ಡಿಸೆಂಬರ್​ 24ರಂದು. ಲೀಲಾವತಿ ಅವರು ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರು. ಕಡು ಬಡತನದಲ್ಲಿ ಹುಟ್ಟಿದವರು ಲೀಲಾವತಿ. ಲೀಲಾವತಿ ಅವರು ಓದಿದ್ದು 2ನೇ ತರಗತಿವರೆಗೆ ಮಾತ್ರ. ಕಾರಣಾಂತರಗಳಿಂದ ಅವರು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಅವರಿವರ ಮನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಬಂತು. ನಂತರ ನಟನೆಯನ್ನು ವೃತ್ತಿಯಾಗಿಸಿಕೊಂಡರು.

ಚಿಕ್ಕ ವಯಸ್ಸಿನಲ್ಲೇ ಸಿನಿಮಾ ಮೇಲೆ ಲೀಲಾವತಿ ಅವರಿಗೆ ಆಸಕ್ತಿ ಮೂಡಿತ್ತು. ಹಾಗಾಗಿ ನಟನೆ ಕಲಿಯಲು ಸುಬ್ಬಯ್ಯ ನಾಯ್ಡು ಅವರ ನಾಟಕದ ಕಂಪನಿಗೆ ಸೇರಿಕೊಂಡರು. ಅನೇಕ ನಾಟಕಗಳಲ್ಲಿ ಅವರು ನಟಿಸಿದರು. ನಂತರ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕವು. ಚೆನ್ನೈಗೆ ಹೋಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!