August 3, 2026
Monday, August 3, 2026
spot_img

ಗುಂಟೂರಿನಿಂದ ಚೆನ್ನೈವರೆಗೆ.. ಗಾನಕೋಗಿಲೆಯ ಮೊದಲ ಪಯಣ ಆರಂಭವಾಗಿದ್ದು ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಕೋಗಿಲೆ ಎಂದೇ ಖ್ಯಾತರಾಗಿರುವ ನಮ್ಮ ಹೆಮ್ಮೆಯ, ಎವರ್​​ಗ್ರೀನ್ ಗೀತೆಗಳ ಗಾಯಕಿ ಎಸ್. ಜಾನಕಿ ಅವರಂಥ ಸಿಂಗರ್‌ ನಮಗೆ ಸಿಕ್ಕಿದ್ದು ಹೇಗೆ ಗೊತ್ತಾ?

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂದು ಹೇಳೋ ಮಾತು ಸುಳ್ಳಲ್ಲ. ಎಂಥ ಪ್ರತಿಭೆಯಿದ್ದರೂ ತಮ್ಮ ಸಣ್ಣ ವಯಸ್ಸಿನಲ್ಲೇ ಲಕ್ಷಣಗಳು ಕಾಣಿಸಿಬಿಡುತ್ತವೆ. ಇದಕ್ಕೆ ಎಸ್‌. ಜಾನಕಿ ಅವರ ಬಾಲ್ಯವೇ ಸಾಕ್ಷಿ. 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ ಗಾಯಕಿ ಬಾಲ್ಯದಿಂದಲೇ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು.

ಶಾಸ್ತ್ರೀಯ ಸಂಗೀತ ಕಲಿಯಲೇಬೇಕು ಎನ್ನುವ ಆಸೆಯಿಂದ ಸಂಗೀತಗಾರರಾದ ಪೈಡಿಸ್ವಾಮಿ ಬಳಿ ಆರಂಭಿಕ ಸಂಗೀತಪಾಠ ಕಲಿತರು. ನಂತರ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡರು. ಇಪ್ಪತ್ತನೇ ವಯಸ್ಸಿನವರೆಗೂ ಕಠಿಣಾಭ್ಯಾಸ ಮಾಡಿ ನಂತರ ಮದ್ರಾಸ್‌ಗೆ ನಗರಕ್ಕೆ ಕಾಲಿಟ್ಟರು. ಅಲ್ಲಿಂದ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಸಂಗೀತಮಯವಾಯ್ತು. ಪ್ರತೀ ಹೆಜ್ಜೆಯೂ ತಾಳವಾಯ್ತು. ಅಂದು ಕಣ್ಣಲ್ಲಿ ಕನಸು ಹೊತ್ತು ಬಂದಿದ್ದ ಗಾಯಕಿ ಇಂದು ಕೋಟ್ಯಂತರ ಜನರ ಕಣ್ಣಾಲಿಯನ್ನು ಒದ್ದೆ ಮಾಡಿ ಇಹಲೋಕದಿಂದ ಮರೆಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !