ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಹಾಗೂ ಸಂಸದೆಯಾದ ಕಂಗನಾ ರಣಾವತ್ ಯಾವಾಗಲೂ ಚರ್ಚೆಯಲ್ಲಿರುವ ನಟಿ ಎಂದರೂ ತಪ್ಪಾಗಲ್ಲ. ಇತ್ತೀಚಿನ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಎಬ್ಬಿಸಿದೆ.
ಯಾವುದೇ ನಟಿಯ ಹೆಸರನ್ನು ಉಲ್ಲೇಖಿಸದಿದ್ದರೂ, ಅವರ ಹೇಳಿಕೆ ಬಾಲಿವುಡ್‌ನ ಖ್ಯಾತ ನಟಿಯೊಬ್ಬರನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂಬ ಊಹಾಪೋಹಗಳು ಜೋರಾಗಿವೆ. ಈ ಪೋಸ್ಟ್‌ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಅದರ ಅರ್ಥ ಕೊಡುತ್ತಿದ್ದಾರೆ.

ನಕಲಿ ಸ್ಕ್ರೀನ್‌ಶಾಟ್‌ಗೆ ಸ್ಪಷ್ಟನೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ವೈರಲ್ ಸ್ಕ್ರೀನ್‌ಶಾಟ್‌ಗೆ ಪ್ರತಿಕ್ರಿಯಿಸಿದ ಕಂಗನಾ, ಅದು ಸಂಪೂರ್ಣ ನಕಲಿ ಎಂದು ಸ್ಪಷ್ಟಪಡಿಸಿದರು. ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿಯನ್ನು ನಂಬಬಾರದು ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಪರೋಕ್ಷ ಟೀಕೆ ಚರ್ಚೆಗೆ ಕಾರಣ
ಸ್ಪಷ್ಟನೆ ನೀಡಿದ ಬಳಿಕ ಕಂಗನಾ, ಹೆಸರನ್ನು ಹೇಳದೆ ನಟಿಯೊಬ್ಬರ ಉಡುಗೆ, ಮಾತಿನ ಶೈಲಿ ಹಾಗೂ ಸಾರ್ವಜನಿಕ ನಿಲುವಿನ ಬಗ್ಗೆ ಟೀಕಿಸಿದರು. ವ್ಯಕ್ತಿತ್ವ ಮತ್ತು ಉಡುಗೆ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಅವರು, ಅಗತ್ಯವಿದ್ದರೆ ಸ್ಟೈಲಿಂಗ್ ಸಲಹೆ ನೀಡಲು ಸಿದ್ಧ ಎಂದೂ ಹೇಳಿದ್ದಾರೆ.

ನೆಟ್ಟಿಗರ ಊಹಾಪೋಹ
ಕಂಗನಾ ಅವರ ಈ ಪೋಸ್ಟ್ ಯಾರನ್ನು ಉದ್ದೇಶಿಸಿ ಎಂಬುದು ಬಹಿರಂಗವಾಗಿಲ್ಲ. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಉಲ್ಲೇಖಿಸಿ, ಹಲವರು ಈ ಹೇಳಿಕೆ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಸದ್ಯ ಕಂಗನಾ ಅವರ ಪೋಸ್ಟ್ ಬಾಲಿವುಡ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



