ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಎಷ್ಟು ಮಂದಿ ನಿಷ್ಠೆಯಲ್ಲಿ ಆಟೋ ಓಡಿಸ್ತಾರೋ ಅಷ್ಟೇ ಮಂದಿ ಹಣ ಪೀಕೋಕೆ ನೋಡ್ತಾರೆ. ಆಟೋ ಡ್ರೈವರ್ ಒಬ್ಬರು ಮೆಜಿಸ್ಟಿಕ್‌ನಿಂದ ಕತ್ರಿಗುಪ್ಪೆಗೆ ಹೋಗೋಕೆ ಬರೋಬ್ಬರಿ 700 ರೂಪಾಯಿ ಕೇಳಿದ್ದಾರೆ.
ಮಹಿಳೆ ಇದಕ್ಕೆ ವಿರೋಧಿಸಿ ಇಷ್ಟೆಲ್ಲಾ ಹೇಗೆ ಕೇಳ್ತೀರಾ ಎಂದು ವಾದ ಮಾಡಿದ್ದಕ್ಕೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆಟೋ ಚಾಲಕನಿಗೆ ಫೈನ್ ಹಾಕಲಾಗಿದೆ.
ಉಪ್ಪಾರಪೇಟೆ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದು, ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಬಿಸಿ ಮುಟ್ಟಿಸಿದ್ದಾರೆ.
ಮೆಜೆಸ್ಟಿಕ್‌ನಲ್ಲಿ ಬೆಳಗ್ಗೆ ಐದು ಗಂಟೆಗೆ ಕತ್ರಿಗುಪ್ಪೆಗೆ ಬರ್ತೀರಾ ಎಂದು ಮಹಿಳೆಯೊಬ್ಬರು ಕೇಳಿದ್ದಾರೆ. ಆಗ ಆಟೋ ಚಾಲಕ 700 ರೂಪಾಯಿ ಎಂದಿದ್ದಾರೆ. ತುಂಬಾ ಜಾಸ್ತಿ ಆಯ್ತು ಎಂದು ಮಹಿಳೆ ಮಾತು ಆರಂಭಿಸಿದಾಗ ಬೇಕಾದ್ರೆ ಬಾ ಇಲ್ಲವಾದ್ರೆ ಹೋಗು ಎಂದು ಏಕವಚನದಲ್ಲಿ ಮಾತು ಆರಂಭಿಸಿದ್ದಾರೆ.
ಆಟೋ ಹತ್ತಿದ ಮಹಿಳೆ ಕೆಳಕ್ಕೆ ಇಳಿದು ಫೋನ್‌ನಲ್ಲಿ ರೆಕಾರ್ಡ್ ಮಾಡೋಕೆ ಆರಂಭಿಸಿದ್ದಾರೆ. ಆಗ ಆಟೋ ಡ್ರೈವರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.



