ಮಲ್ಪೆ ಬೀಚ್ ಗೆ ತಾತ್ಕಾಲಿಕ ಬೇಲಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲ್ಪೆ ಬೀಚ್ ಮಳೆಗಾಲದಲ್ಲಿ ಬಹಳ ಒರಟಾಗಿದ್ದು, ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಬೀಚ್ ಅಭಿವೃದ್ಧಿ ಸಮಿತಿಯು ಪ್ರವಾಸಿಗರು ನೀರಿಗೆ ಇಳಿಯದಂತೆ ಬೀಚ್‍ ನಲ್ಲಿ ಸುಮಾರು 1 ಕಿಮಿ ಉದ್ದಕ್ಕೆ 8 ಅಡಿ ಎತ್ತರದ ಬಲೆಯ ತಾತ್ಕಾಲಿಕ ಬೇಲಿ ಅಳವಡಿಸಿದೆ. ಅಪಾಯದ ಬಗ್ಗೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಕೆಂಪು ಧ್ವಜಗಳನ್ನು ಹಾಕಲಾಗಿದೆ. ಬಲೆಯನ್ನು ದಾಟಿ ಸಮುದ್ರಕ್ಕಿಳಿದವರಿಗೆ 500 ರು. ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯ ಫಲಕಗಳನ್ನೂ ಅಳವಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!